ಭಟ್ಕಳ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ (cabinet expansion) ಭಟ್ಕಳ ಶಾಸಕ (Bhatkal MLA) ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ (Ministerial Post) ಕೈತಪ್ಪಿರುವ ವಿಚಾರ ಇದೀಗ ಭಟ್ಕಳ ಕಾಂಗ್ರೆಸ್ ವಲಯದಲ್ಲೇ (Bhatkal Congress circle) ಬಹಿರಂಗ ಅಸಮಾಧಾನಕ್ಕೆ ಕಾರಣವಾಗಿದೆ. ಈವರೆಗೆ ಮೌನವಾಗಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡರ ಪೈಕಿ ಭಟ್ಕಳ ಬ್ಲಾಕ್ ಕಾಂಗ್ರೆಸ್‌ನ (BCC) ಮಾಜಿ ಅಧ್ಯಕ್ಷ ವಿಠ್ಠಲ ನಾಯ್ಕ ಮೊದಲಾಗಿ ಬಹಿರಂಗವಾಗಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಅಧ್ಯಕ್ಷ ವಿಠ್ಠಲ ನಾಯ್ಕ ಅವರು ಮುಖ್ಯಮಂತ್ರಿ (Chief minister) ಅವರಿಗೆ ಬಹಿರಂಗ ಪತ್ರ (open letter) ಬರೆದು, ಅದನ್ನು ತಮ್ಮ ಫೇಸ್ಬುಕ್ (facebook) ಖಾತೆಯಲ್ಲಿ ಪ್ರಕಟಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಗಸ್ಟ್ ೬ರಂದು ಪ್ರಕಟಿಸಿರುವ ಬಹಿರಂಗ ಪತ್ರದಲ್ಲಿ (open letter), ಶಾಸಕ ಮಂಕಾಳ ವೈದ್ಯ ಅವರಿಗೆ ಸಚಿವ ಸ್ಥಾನ ನೀಡದಿರುವುದರಿಂದ ಉಂಟಾದ ಅನ್ಯಾಯ ಮತ್ತು ಕಾರ್ಯಕರ್ತರಲ್ಲಿರುವ ಬೇಸರವನ್ನು ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ನಡೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಠ್ಠಲ ನಾಯ್ಕ, ಪಕ್ಷಕ್ಕಾಗಿ ದುಡಿದ ನಾಯಕರಿಗೆ ನ್ಯಾಯ ಸಿಗಬೇಕೆಂಬ ನಿರೀಕ್ಷೆ ಕಾರ್ಯಕರ್ತರಲ್ಲಿತ್ತು. ಆದರೆ ಮಂಕಾಳ ವೈದ್ಯ ಅವರನ್ನು ಸಚಿವ ಸಂಪುಟದಿಂದ ಹೊರಗಿಡುವ ಮೂಲಕ ಆ ನಿರೀಕ್ಷೆಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

Mankal Vaidya/ ಭಟ್ಕಳ ಶಾಸಕ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಮೌನಕ್ಕೆ ಶರಣಾದ ಬ್ಲಾಕ್ ಕಾಂಗ್ರೆಸ್? 

ವಿಶೇಷವೆಂದರೆ, ಸಚಿವ ಸ್ಥಾನ ಕೈತಪ್ಪಿದ ನಂತರ ಭಟ್ಕಳ ಬ್ಲಾಕ್ ಕಾಂಗ್ರೆಸ್‌ನ ಹಾಲಿ ಅಧ್ಯಕ್ಷರು ಹಾಗೂ ಇತರ ಪ್ರಮುಖ ಪದಾಧಿಕಾರಿಗಳು ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಠ್ಠಲ ನಾಯ್ಕ ಅವರು ಏಕಾಂಗಿಯಾಗಿ ಮಂಕಾಳ ವೈದ್ಯ ಅವರ ಪರವಾಗಿ ಧ್ವನಿ ಎತ್ತಿರುವುದು ಸ್ಥಳೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಮೊದಲ ಬಾರಿಗೆ ಭಟ್ಕಳದಲ್ಲಿ ಬಹಿರಂಗ ಅಸಮಾಧಾನ

ಕಾಂಗ್ರೆಸ್ ಪಾಳೆಯದಲ್ಲಿಯೇ ಮೊದಲಾಗಿ ಬಹಿರಂಗ ಅಸಮಾಧಾನ ಹೊರಬಿದ್ದಿರುವುದು, ಮುಂದಿನ ದಿನಗಳಲ್ಲಿ ಸ್ಥಳೀಯ ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಇದೇ ವೇಳೆ ಮಂಕಾಳ ವೈದ್ಯ ಬೆಂಬಲಿಗರು ಮತ್ತು ಕಾರ್ಯಕರ್ತರು ಪಕ್ಷದ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸುತ್ತಿದ್ದಾರೆ.

Mankal Vaidya/ ಸಚಿವ ಲಕ್ಷ್ಮಣ ಸವದಿ ಸಭೆಗೆ ಮಂಕಾಳ ವೈದ್ಯ ಗೈರು: ಕಾರಣವೇನು?


ವಿಠಲ ನಾಯ್ಕ ಅವರು ಬರೆದ ಬಹಿರಂಗ ಪತ್ರವನ್ನು ಇಲ್ಲಿ ಕೆಳಗೆ ಯಥಾವತ್ ಪ್ರಕಟಿಸಲಾಗಿದೆ:

ದಿನಾಂಕ: 06 ಆಗಸ್ಟ್ 2026

ಇಂದ:

Vittal h naik

Ex Block Congress president Bhatkal

Uttarkannada

ಗೆ:

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರ್ಕಾರ,

ವಿಧಾನಸೌಧ, ಬೆಂಗಳುರು.

ವಿಷಯ: ಸೋಮವಾರ (03-08-2026) ನಡೆದ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಿರಿಯ ನಾಯಕ ಶ್ರೀ ಮಾಂಕಳ ವೈದ್ಯ ಅವರಿಗೆ ಉಂಟಾದ ಅನ್ಯಾಯ ಹಾಗೂ ನೋವಿನ ಕುರಿತು.

ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ,

ನಾನು ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಪಕ್ಷದ ತತ್ತ್ವ-ಸಿದ್ಧಾಂತಗಳಿಗೆ ಬದ್ಧನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಪಕ್ಷದ ಏಳು-ಬೀಳುಗಳನ್ನು ಹತ್ತಿರದಿಂದ ಕಂಡಿರುವ ನನಗೆ ಇತ್ತೀಚೆಗೆ ನಡೆದ ಒಂದು ಘಟನೆಯು ತೀವ್ರ ಬೇಸರವನ್ನುಂಟು ಮಾಡಿದೆ.

ಕಳೆದ ಸೋಮವಾರ (ದಿನಾಂಕ: 03-08-2026) ನಡೆದ ಸಚಿವ ಸಂಪುಟದ ಎರಡನೇ ಪಟ್ಟಿ ವಿಸ್ತರಣೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಾಜಿ ಸಚಿವರಾದ ಶ್ರೀ ಮಾಂಕಳ ವೈದ್ಯ ಅವರ ಹೆಸರು ಸೇರ್ಪಡೆಯಾಗಿತ್ತು. ಸ್ವತಃ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೇ ಅವರಿಗೆ ಕರೆ ಮಾಡಿ, “ನಿಮ್ಮ ಹೆಸರು ಪಟ್ಟಿಯಲ್ಲಿದೆ, ಸಿದ್ಧರಾಗಿ ಬನ್ನಿ” ಎಂದು ತಿಳಿಸಿದ್ದರು. ಈ ಸುದ್ದಿ ಎಲ್ಲಾ ದೃಶ್ಯ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.

ಆದರೆ, ಪಟ್ಟಿ ಹೊರಬಿದ್ದ ಒಂದು ಗಂಟೆಯ ಒಳಗಾಗಿ ಶ್ರೀ ಮಾಂಕಳ ವೈದ್ಯ ಅವರ ಹೆಸರನ್ನು ಕೈಬಿಟ್ಟು, ಅವರ ಬದಲಾಗಿ ದಾವಣಗೆರೆಯ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಯಿತು. ಅಷ್ಟೇ ಅಲ್ಲದೆ, ಮಾಧ್ಯಮಗಳಲ್ಲಿ “ಇದು ಟೈಪಿಂಗ್ ಮಿಸ್ಟೇಕ್‌ನಿಂದ ಆಗಿರುವ ಪ್ರಮಾದ” ಎಂದು ಬಿಂಬಿಸಲಾಯಿತು.

ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಇಂತಹ ‘ಟೈಪಿಂಗ್ ಮಿಸ್ಟೇಕ್’ ನೆಪ ಹೇಳುವುದು ಪಕ್ಷದ ವ್ಯವಸ್ಥೆಗೆ ಮುಜುಗರ ತರುವುದಲ್ಲದೆ, ಶ್ರೀ ಮಾಂಕಳ ವೈದ್ಯ ಅವರಂತಹ ಸದಾ ಪಕ್ಷಕ್ಕೆ ನಿಷ್ಠರಾಗಿರುವ ನಾಯಕರಿಗೆ ಮಾಡಿದ ಘೋರ ಅವಮಾನವಾಗಿದೆ.

ನನ್ನ ವಿನಂತಿ ಹಾಗೂ ಮುಖ್ಯಾಂಶಗಳು:

* ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು: ಮಾಂಕಳ ವೈದ್ಯ ಅವರು ಎಂದಿಗೂ ನಿಮ್ಮ ಮಾತು ಮೀರಿದವರಲ್ಲ. ಅವರು ನಿಮ್ಮ ಅತ್ಯಂತ ಆಪ್ತ ನಾಯಕರಲ್ಲಿ ಒಬ್ಬರು. ಅಂತಹ ಪರಿಸ್ಥಿತಿ ಬಂದಿದ್ದರೆ, ಅವರನ್ನು ಖುದ್ದಾಗಿ ಮನೆಗೆ ಕರೆಸಿ, ಸಮಸ್ಯೆಯನ್ನು ಮನವರಿಕೆ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಅವರು ಖಂಡಿತ ಪಕ್ಷದ ಹಿತದೃಷ್ಟಿಯಿಂದ ತ್ಯಾಗ ಮಾಡಲು ಸಿದ್ಧರಾಗುತ್ತಿದ್ದರು.

* ಸಾರ್ವಜನಿಕ ಗೌರವ: ಅವರೇ ಸ್ವತಃ ಪತ್ರಿಕಾಗೋಷ್ಠಿ ನಡೆಸಿ ಈ ನಿರ್ಧಾರ ಪ್ರಕಟಿಸುವಂತೆ ಮಾಡಿದ್ದರೆ, ಅವರ ವೈಯಕ್ತಿಕ ವರ್ಚಸ್ಸು ಹೆಚ್ಚುತ್ತಿತ್ತು ಹಾಗೂ ಪಕ್ಷಕ್ಕೂ ಉತ್ತಮ ಸಂದೇಶ ರವಾನೆಯಾಗುತ್ತಿತ್ತು.

* ಸಂಘಟನಾತ್ಮಕ ಹಿನ್ನಡೆ: ಯಾವುದೇ ಮುನ್ಸೂಚನೆ ಇಲ್ಲದೆ, ಮಾಧ್ಯಮಗಳ ಮೂಲಕ ‘ಟೈಪಿಂಗ್ ಪ್ರಮಾದ’ ಎಂದು ಹೇಳಿ ಅವರ ಹೆಸರು ಬದಲಾಯಿಸಿದ್ದು ಅವರ ಬೆಂಬಲಿಗರಿಗೂ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ತೀವ್ರ ನೋವುಂಟು ಮಾಡಿದೆ.

ರಾಜಕೀಯ ಚಾಣಕ್ಯ ಹಾಗೂ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ನಿಮ್ಮ ನಾಯಕತ್ವದಲ್ಲಿ ಇಂತಹ ಘಟನೆಗೆ ಆಸ್ಪದ ಸಿಕ್ಕಿದ್ದು ನಿಜಕ್ಕೂ ಬೇಸರ ತಂದಿದೆ.

ಆದ್ದರಿಂದ, ಪಕ್ಷದ ಹಿರಿಯ ನಾಯಕ ಹಾಗೂ 35 ವರ್ಷಗಳ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ತಮ್ಮಲ್ಲಿ ವಿನಂತಿಸುವುದೇನೆಂದರೆ—ಶ್ರೀ ಮಾಂಕಳ ವೈದ್ಯ ಅವರಿಗೆ ಉಂಟಾಗಿರುವ ಈ ಅನ್ಯಾಯ ಮತ್ತು ಮುಜುಗರವನ್ನು ಸರಿಪಡಿಸಿ, ಅವರಿಗೆ ಸೂಕ್ತ ಗೌರವ ಹಾಗೂ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ನಂಬುಗೆಯ,

ವಿಠ್ಠಲ ನಾಯ್ಕ

Case registered/ ಶಿರಾಲಿಯಲ್ಲಿ ವ್ಯಕ್ತಿ ಬೆಂಕಿಗೆ ಆಹುತಿ