ಭಟ್ಕಳ: ಹೊನ್ನಾವರ (Honnavar) ತಾಲೂಕಿನ ಮಂಕಿ ಮೂಲದ ತಾಯಿ-ಮಗಳು ಕಾಣೆಯಾಗಿರುವ (missing) ಬಗ್ಗೆ ಭಟ್ಕಳ ಗ್ರಾಮೀಣ (Bhatkal rural) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (complaint registered). ಫಾತಿಮಾ ಸಮ್ರೀನ್ ಮೊಹಮ್ಮದ ಅಬ್ಬಾಸ ಕುರಡಿ (೩೧) ಹಾಗೂ ಜುಲೇಖಾ ಪರ‍್ವಿನ್ (೫) ಕಾಣೆಯಾದವರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಫಾತಿಮಾ ಸಮ್ರೀನ್ ಗೋಧಿ ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, ೪.೮ ಅಡಿ ಎತ್ತರ ಇದ್ದು, ಮನೆಯಿಂದ ಹೋಗುವಾಗ ಚೂಡಿದಾರ ಮತ್ತು ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ. ಉರ್ದು, ಕನ್ನಡ, ನವಾಯಿತಿ, ಹಿಂದಿ ಮಾತನಾಡುತ್ತಾರೆ. ಜುಲೇಖಾ ಪರ‍್ವಿನ್ ಗೋಧಿ ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, ೨.೫ ಅಡಿ ಎತ್ತರ, ಮನೆಯಿಂದ ಹೋಗುವಾಗ ಫ್ರಾಕ್ ಮತ್ತು ಲೆಗಿನ್ಸ್ ಧರಸಿರುತ್ತಾಳೆ. ಉರ್ದು, ಹಿಂದಿ ಮಾತನಾಡುತ್ತಾಳೆ.

cabinet/ ಸಚಿವ ಸಂಪುಟದಲ್ಲಿ ಮಂಕಾಳ ವೈದ್ಯಗೆ ಕೋಕ್: ಎನ್‌ ರವಿಕುಮಾರ್ ವ್ಯಂಗ್ಯ

ಕಾಣೆಯಾಗಿರುವ (missing) ಈ ಮೇಲಿನ ಚಹರೆವುಳ್ಳ ತಾಯಿ-ಮಗಳು ಸಾರ್ವಜನಿಕರಿಗೆ ಕಂಡುಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂ ಸಂ ೦೮೩೮೫-೨೨೭೩೩೩, ಪಿಎಸ್‌ಐ ಮೊ ಸಂ ೯೪೮೦೮೦೫೨೫೨ ಅಥವಾ ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂ ಸಂ ೦೮೩೮೨-೨೨೬೫೫೦/೧೧೨/೧೦೦ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

cabinet/ ಸಚಿವ ಸಂಪುಟದಲ್ಲಿ ಮಂಕಾಳ ವೈದ್ಯಗೆ ಕೋಕ್: ಎನ್‌ ರವಿಕುಮಾರ್ ವ್ಯಂಗ್ಯ