ಭಟ್ಕಳ ಡೈರಿ ವರದಿ

ಭಟ್ಕಳ: ಶ್ರೀ ಕಟ್ಟೆವೀರ ಯುವಶಕ್ತಿ ಸಂಘ (ರಿ) ಮುಟ್ಟಳ್ಳಿ, ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ (ರಿ) ಭಟ್ಕಳ, ತಾಲೂಕು ಸಾರ್ವಜನಿಕ ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೆ ೨೭ರಂದು ಭಾನುವಾರ ಮುಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮುಟ್ಟಳ್ಳಿ ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಶಿಬಿರ ನಡೆಯಲಿದೆ.

ಮುಟ್ಟಳ್ಳಿಯ ನಿವೃತ್ತ ಶಿಕ್ಷಕ ಹಾಗೂ ಹಿರಿಯ ಮುಖಂಡ ಎಂ ಕೆ ನಾಯ್ಕ ಶಿಬಿರ ಉದ್ಘಾಟಿಸಲಿದ್ದಾರೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಜನರಲ್ ಸರ್ಜನ್ ಡಾ ಅರುಣಕುಮಾರ್ ಎನ್ ಎ ಅಧ್ಯಕ್ಷತೆ ವಹಿಸಲಿದ್ದಾರೆ. ಕಟ್ಟೆವೀರ ಯುವಶಕ್ತಿ ಸಂಘದ ಅಧ್ಯಕ್ಷ ಚಂದ್ರು ಕುಪ್ಪಯ್ಯ ನಾಯ್ಕ ಹಾಗೂ ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹೇಶ ನರಸಿಂಹ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಫಿಜಿಷಿಯನ್ ಡಾ ಪ್ರಕಾಶ ವಿ ನಾಯ್ಕ, ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್‌ನ ದಂತ ವೈದ್ಯ ಡಾ ರವಿ ನಾಯ್ಕ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವೀಣಾ ಕುಮಾರಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಕ್ತದಾನವು ಅಗತ್ಯವಿರುವವರಿಗೆ ಜೀವ ಉಳಿಸುವ ಮಹತ್ವದ ಸೇವೆಯಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ :

ಮುರ್ಡೇಶ್ವರ ಗಣೇಶೋತ್ಸವ: ₹೧೧.೧೦ ಲಕ್ಷಕ್ಕೆ ಮುಡಿಗಂಧ ಪ್ರಸಾದ ಹರಾಜು

ಜನಸೇವೆಯ ಜನಾನುರಾಗಿ ವ್ಯಕ್ತಿ ಮುರುಡೇಶ್ವರದ ವೈದ್ಯ ಇನ್ನಂಜೆ ರಾಜಗೋಪಾಲ ಭಟ್

ಮುರ್ಡೇಶ್ವರದ ಹಿರಿಯ ವೈದ್ಯ ನಿಧನ

ಭಟ್ಕಳದ ಮಹಾಲೆಮನೆ ಗಣೇಶೋತ್ಸವ ಸಂಪನ್ನ: ೧೧ ದಿನಗಳ ಸಂಭ್ರಮಕ್ಕೆ ತೆರೆ