ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಳ್ವೆಕೋಡಿ ೧ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಗುವಿನ ಸಮಪರ್ಕವಾದ ಬೆಳವಣಿಗೆಗೆ ತಾಯಿ ಎದೆಹಾಲು ಅವಶ್ಯವಾದದ್ದು; ಅಮೃತ ಸಮಾನ ಮತ್ತು ಮಗುವಿಗೆ ಸಂಪೂರ್ಣವಾದ ಪೌಷ್ಟಿಕ ಆಹಾರವನ್ನು ಹಾಲು ಒದಗಿಸುತ್ತದೆ. ಕಡ್ಡಾಯವಾಗಿ ಶಿಶುವಿಗೆ ಆರು ತಿಂಗಳು ಪೂರ್ಣ ಆಗುವ ತನಕ ತಾಯಿ ಎದೆ ಹಾಲು (Breastfeeding) ನೀಡಬೇಕೆಂದು ಅಂಗನವಾಡಿ ಮೇಲ್ವಿಚಾರಕಿ ಶ್ವೇತಾ ಭೋಮಕರ್ ತಿಳಿಸಿದರು.
DMO visit/ ಭಟ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ ಅರುಣಕುಮಾರ ಪರ ಸಾರ್ವಜನಿಕರ ಬ್ಯಾಟಿಂಗ್
ಮಗುವಿಗೆ ತಾಯಿ ಎದೆಹಾಲು ಯಾವ ರೀತಿ ಕುಡಿಸಬೇಕು, ಗರ್ಭಿಣಿ, ಬಾಣಂತಿಯರ ಆರೈಕೆ, ಆಹಾರ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಸಿ ಚ್ ಒ (CHO) ಪವಿತ್ರ ಎಂ, ಪಿ ಎಚ್ ಸಿ ಒ (PHCO) ದೇವಿ ಎಸ್ ಜಿ ವಿವರಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಮಹಿಳೆಯರು, ಗರ್ಭಿಣಿ , ಬಾಣಂತಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಮೊಗೇರ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಹೇಮಾ ಮೋಗೇರ ವಂದಿಸಿದರು.
DMO visit/ ಭಟ್ಕಳ ಆಸ್ಪತ್ರೆ ವೈದ್ಯಾಧಿಕಾರಿ ಡಾ ಅರುಣಕುಮಾರ ಪರ ಸಾರ್ವಜನಿಕರ ಬ್ಯಾಟಿಂಗ್
