ಭಟ್ಕಳ: ತುಮಕೂರು (Tumkur) ಜಿಲ್ಲೆಯ ಸಿರಾದಲ್ಲಿ ನಡೆದ ಸಿ ಐ ಎಸ್ ಸಿ ಇ (CISCE) ರಾಜ್ಯ ಮಟ್ಟದ (State level) ಕರಾಟೆ ಪಂದ್ಯಾವಳಿಯಲ್ಲಿ (Karate Tournament) ಭಾಗವಹಿಸಿದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹೆಮ್ಮೆಯ ಸಾಧನೆ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರಾಟೆ ಪಂದ್ಯಾವಳಿಯಲ್ಲಿ (Karate Tournament) ಶಾಲೆಯ ಮೂವರು ವಿದ್ಯಾರ್ಥಿಗಳು ತಮ್ಮ ತೂಕದ ವಿಭಾಗಗಳಲ್ಲಿ ಚಿನ್ನದ ಪದಕ (gold medal) ಗೆದ್ದುಕೊಂಡಿದ್ದಾರೆ ಮತ್ತು ರಾಷ್ಟ್ರೀಯ ಮಟ್ಟದ (national level) ಸ್ಪರ್ಧೆಯಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ೬ನೇ ತರಗತಿಯ ಪ್ರಣವಿ ರಾಮಚಂದ್ರ ಕಿಣಿ, ೯ನೇ ತರಗತಿಯ ತುಷಾರ್ ಸಚಿನ್ ಮಹಾಲೆ ಮತ್ತು ೧೦ನೇ ತರಗತಿಯ ವಿಜೇತ್ ಮೊಗೇರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರು. ಅದೇ ಸ್ಪರ್ಧೆಯಲ್ಲಿ ೭ನೇ ತರಗತಿಯ ಭಾನ್ವಿ, ೭ನೇ ತರಗತಿಯ ಮಯೂರ್, ೮ನೇ ತರಗತಿಯ ಧಾನ್ವಿ, ೯ನೇ ತರಗತಿಯ ಸೃಷ್ಟಿ, ೯ನೇ ತರಗತಿಯ ಸಮೀಕ್ಷಾ ಕಂಚಿನ ಪದಕ (bronze medal) ಪಡೆದಿದ್ದಾರೆ.
Sports Meet/ ಸಿಐಎಸ್ಸಿಇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಂಜಲಿ ಶಾಲೆಗೆ ಪದಕಗಳ ಸುರಿಮಳೆ
ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ತರಬೇತಿ ನೀಡಿದ ಕರಾಟೆ ತರಬೇತುದಾರರಾದ ಸುರೇಶ ಮೊಗೇರ, ರಾಜಶೇಖರ ಗೌಡ, ಆರ್ಯನ್ ನಾಯಕ, ತೇಜಸ್ ನಾಯಕ ಹಾಗೂ ಭಟ್ಕಳದ ಶೋಟೊಕಾನ್ ಕರಾಟೆ ಸಂಸ್ಥೆಗೆ ಶಾಲೆಯವರು ಧನ್ಯವಾದ ಸಲ್ಲಿಸಿದ್ದಾರೆ. ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯುದ್ದಕ್ಕೂ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಬೆಂಬಲ ನೀಡಿದ್ದರು.
Karate Competition/ ತುಷಾರ ಮಹಾಲೆ ಸಹಿತ ೧೬ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
