ಭಟ್ಕಳ: ಗಾಂಜಾ ಸೇವನೆ ಮಾಡಿದ ಆರೋಪದಡಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆ ೧೫ರಂದು ಆರು ಜನರನ್ನು ಮುರುಡೇಶ್ವರ (Murudeshwar) ಪೊಲೀಸರು ಬಂಧಿಸಿ (arrest) ಪ್ರಕರಣ ದಾಖಲಿಸಿದ್ದಾರೆ (case registered).
ಉಪ ನಿರೀಕ್ಷಕ ಹಣಮಂತ ಬಿರಾದಾರ ಅವರು ಹುಬ್ಬಳ್ಳಿಯ ಕೆ ಹೆಚ್ ಬಿ ಜಡ್ಜ ಕಾಲೋನಿ ನಿವಾಸಿ ಮಹಾಂತೇಶ ತಂದೆ ಯಮನಪ್ಪ ಜಿನಗಿ (೩೨ ), ಹುಬ್ಬಳ್ಳಿ (Hubballi) ಗೊಪನಕೊಪ್ಪ ನಿವಾಸಿ ಕಾರ್ತಿಕ ತಂದೆ ಶಂಕರ ಜಗದಾಳೆ (೨೬) ಅವರನ್ನು ರಾತ್ರಿ ೯-೫೦ ಗಂಟೆಯ ಸುಮಾರಿಗೆ ಮುರ್ಡೇಶ್ವರದ (Murudeshwar) ಮ್ಹಾತೋಬಾರ ದೇವಸ್ಥಾನದ ಹತ್ತಿರದ ಬಲಬದಿ ಬೀಚ್‌ನ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ನಿರೀಕ್ಷಕ ಜಗದೀಶ ಹಂಚನಾಳ ಅವರು ಹುಬ್ಬಳ್ಳಿಯ ಉಣಕಲ್ ಸಾಯಿನಗರದ ಸುನೀಲ್ ರಮೇಶಕೋಟಿ (೩೦) ಮತ್ತು ಧಾರವಾಡ (Dharwad ) ಹೆಬ್ಬಳ್ಳಿಯ ಚೈತನ್ಯ ತಂದೆ ಸುಧೀರ ಬೆಟಗೇರಿ (೨೫) ಎಂಬಿಬ್ಬರನ್ನು ರಾತ್ರಿ ೧೦ ಗಂಟೆಯ ಸುಮಾರಿಗೆ ಮುರ್ಡೇಶ್ವರದ ಎಡಬದಿಯ ಬೀಚ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದಿದ್ದಾರೆ.
Independence Day/ ಭಟ್ಕಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಉಪ ನಿರೀಕ್ಷಕ ಲೊಕನಾಥ ರಾಠೋಡ ಅವರು ಕಾಲೇಜು ವಿದ್ಯಾರ್ಥಿ ಹುಬ್ಬಳ್ಳಿ ತಾಲೂಕಿನ ಅಮರಗೊಳದ ಸುನೀಲಕುಮಾರ ತಂದೆ ಯಮನಪ್ಪ ಜಿನಗಿ (೩೦) ಮತ್ತು ಗದಗ (Gadag) ಜಿಲ್ಲೆಯ ಕಲ್ಲೂರ ವಾಸಿ ವಿನಾಯಕ ತಂದೆ ವೆಂಕಪ್ಪ ಮುಶಣ್ಣವರ (೨೫) ರಾತ್ರಿ ೧೦-೨೫ ಗಂಟೆಯ ಸುಮಾರಿಗೆ ಮುರ್ಡೇಶ್ವರದ ಮ್ಹಾತೋಬಾರ ದೇವಸ್ಥಾನದ ಮುಂದಿನ ತೂದಳ್ಳಿ ರಸ್ತೆಯ ಮೀನು ಮಾರುಕಟ್ಟೆ ಹತ್ತಿರ ವಶಕ್ಕೆ ಪಡೆದಿದ್ದಾರೆ. ಭಟ್ಕಳ (Bhatkal) ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಎಲ್ಲ ಆರು ಜನರ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದಾಗ ಆಪಾದಿತರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
VB–G RAM–G/ ಗ್ರಾಮೀಣ ಜನರ ಸಬಲೀಕರಣವೇ ವಿಕಸಿತ ಭಾರತದ ನಿಜವಾದ ಅಡಿಪಾಯ: ರಾಜೇಶ ಮಹಾಲೆ


