ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ (Mohammed Paigambar) ೧೫೦೧ನೇ ಜಯಂತಿ ಅಂಗವಾಗಿ ಭಟ್ಕಳ (Bhatkal) ಮರ್ಕಝಿ ಮಿಲಾದ್ ಕಮಿಟಿ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಮಿಲಾದ್ ಮೆರವಣಿಗೆ (Milad procession) ಅದ್ದೂರಿಯಾಗಿ ನಡೆಯಿತು. ಈದ್ ಮಿಲಾದುನ್ನಬಿ (Eid miladunnabi) ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ (Milad procession) ಫೈಝೆ ರಸೂಲ್, ಬಝ್ಮೆ ಫೈಝೆ ರಸೂಲ್, ತಾಜುಶ್ಶುನ್ನತ್, ಎಸ್‌ಎಸ್‌ಎಫ್ ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
Bhatkal/ ಅತಿವೇಗದ ಕಾರು ಚಾಲನೆ: ಬೈಕ್ ಸವಾರನಿಗೆ ಗಂಭೀರ ಗಾಯ
ಬಂದರ್ ರಸ್ತೆಯ ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಶಮ್ಸುದ್ದೀನ್ ವೃತ್ತ, ಅರ್ಬನ್ ಬ್ಯಾಂಕ್, ಸುಲ್ತಾನ್ ಸ್ಟ್ರೀಟ್, ಚೌಕ್ ಬಜಾರ್ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿತು. ಬಳಿಕ ಹಳೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಮೈದಾನದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಪಾಲ್ಗೊಂಡವರು ಪ್ರವಾದಿ ಮುಹಮ್ಮದ್ ಅವರ ಸಂದೇಶ ಸಾರುವ ಬಾವುಟಗಳು ಹಾಗೂ ಧರ್ಮಧ್ವಜಗಳನ್ನು ಹಿಡಿದು ಸಾಗಿದರು. ಮಕ್ಕಳ ನೃತ್ಯ, ಕವಾಯತು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮೆರುಗು ತಂದವು. ಮೆರವಣಿಗೆಯುದ್ದಕ್ಕೂ ಪ್ರವಾದಿಯವರ ಸಂದೇಶ ಸಾರುವ ಹಾಡುಗಳನ್ನು ಹಾಡಲಾಯಿತು. ಧಾರ್ಮಿಕ ಸ್ತಬ್ಧಚಿತ್ರ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.
village assistants/ ನಾಲ್ಕೈದು ದಿನಗಳಲ್ಲಿ ಸಿಎಂ ಜತೆ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳ ಸಭೆ: ಜಿ ಪರಮೇಶ್ವರ
ಗಣ್ಯರ ಉಪಸ್ಥಿತಿ: ಮರ್ಕಝಿ ಮಿಲಾದ್ ಕಮಿಟಿಯ ಸಂಚಾಲಕ ಮುನೀರ್ ಅಹ್ಮದ್ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಖಾಜಾ ಹಸನ್ ಕಲಾಯಿವಾಲೆ, ಅಬ್ದುಲ್ ಅಲೀಮ್ ಗವಾಯಿ, ಇಸ್ಮಾಯಿಲ್ ಹಬೀಬುಲ್ಲಾಹ್, ಡಾ ಯಾಹ್ಯಾ ಅಸ್ಕರಿ, ಆಸಿಫ್ ಇಕ್ಬಾಲ್ ಕಲಾಯಿವಾಲೆ, ಇದ್ರೀಸ್ ಮೊಹತೆಶಂ ರೊಡ್ಡ, ಮೌಲಾನಾ ಫೈಝಾನ್ ರಝಾ, ನವಾಝ್ ಶಿರಾಲಿ, ಶಫೀಖ್ ಬ್ಯಾರಿ, ಅಶ್ರಫ್ ತೋನ್ಸೆ ಸೇರಿದಂತೆ ಹಲವು ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
Scooter accident/ ಭಟ್ಕಳದಲ್ಲಿ ಸ್ಕೂಟರ್ ಅಪಘಾತ: ಗಾಯಗೊಂಡಿದ್ದ ಸವಾರ ಸಾವು
ಬಿಗಿ ಪೊಲೀಸ್ ಬಂದೋಬಸ್ತ್: ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (police superintendent) ದೀಪನ ಎಂ ಎನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ASP) ಎಂ ಕೃಷ್ಣಮೂರ್ತಿ, ಡಿವೈಎಸ್ಪಿ (DySP) ಗಿರೀಶ್, ನಗರ ಠಾಣೆ ಪಿಐ ದಿವಾಕರ ಪಿ ಎಂ, ಗ್ರಾಮೀಣ ಠಾಣೆ ಪಿಐ ವೆಂಕಟೇಶ ಎಸ್ ಮುರ್ನಾಲ್ ಹಾಗೂ ನಗರ ಠಾಣೆ ಪಿಎಸ್ಐ ನವೀನ್ ಎಸ್ ನಾಯ್ಕ ನೇತೃತ್ವದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

