ಭಟ್ಕಳ: ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗುಜರಾತ (Gujarat) ಮೂಲದ ಮೆಕ್ಯಾನಿಕ್‌ವೊಬ್ಬರು ಮೃತಪಟ್ಟಿರುವ (Mechanic dies) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಪನಕಟ್ಟಾ ಸಮೀಪ ನಡೆದಿದೆ. ಮೃತರನ್ನು ಗುಜರಾತಿನ ವಡೋದರ ಜಿಲ್ಲೆಯ ಬಾಜ್ವಾ ನಿವಾಸಿ ಪವಾರ ಸುನೀಲ ತಂದೆ ಅಪ್ಪಾಭಾಯ (೩೩) ಎಂದು ಗುರುತಿಸಲಾಗಿದೆ. ಅವರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
Raksha Bandhan/ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಸುನೀಲ ಅವರು ಆಗಸ್ಟ್ ೨೭ರಂದು ರಾತ್ರಿ ೭.೨೬ರ ಸುಮಾರಿಗೆ ಮಂಗಳೂರಿನಿಂದ ಗುಜರಾತಿನ ವಡೋದರಕ್ಕೆ ತೆರಳುತ್ತಿದ್ದ ಗಾಂಧಿಧಾಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು (train) ಭಟ್ಕಳದ (Bhatkal) ಸರ್ಪನಕಟ್ಟಾ ಸಮೀಪ ಸಂಚರಿಸುತ್ತಿದ್ದ ವೇಳೆ ಆಗಸ್ಟ್ ೨೮ರಂದು ಬೆಳಗಿನ ಜಾವ ಸುಮಾರು ೩.೩೦ಕ್ಕೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ (Mechanic dies) ಎನ್ನಲಾಗಿದೆ.
Felicitation/ ಭಟ್ಕಳ ತಾಲೂಕು ಕಸಾಪದಿಂದ ನಿವೃತ್ತ ಮುಖ್ಯಾಧ್ಯಾಪಕ ಗಣಪತಿ ಶಿರೂರು ಸನ್ಮಾನ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಸಂಬಂಧಿ ಪವಾರ ರಾಜುಭಾಯ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ (police station) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case registered), ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
memorandum/ ಭಟ್ಕಳ ರಿಕ್ಷಾ ಚಾಲಕರ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ

