ಭಟ್ಕಳ ಡೈರಿ ವರದಿ

ಭಟ್ಕಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ೪೫ ವರ್ಷದ ವ್ಯಕ್ತಿಯೊಬ್ಬರು ರೈಲಿನ ಅಡಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಶಿರಾಲಿ ಗ್ರಾಮದ ಬಡ್ಡುಕುಳಿ ರೈಲ್ವೆ ಹಳಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತರನ್ನು ಬೈಲೂರು ಗ್ರಾಮದ ನೀರಗದ್ದೆ ನಿವಾಸಿ ತಿಮ್ಮಪ್ಪ ನಾರಾಯಣ ನಾಯ್ಕ (೪೫) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಶನಿವಾರ ಮುಂಜಾನೆ ಸುಮಾರು ೩.೩೦ರ ವೇಳೆಗೆ ಮಡಗಾಂವ್‌ನಿಂದ ದಕ್ಷಿಣ ಕನ್ನಡ ಜಿಲ್ಲೆಯ ತೊಕೂರು ಕಡೆಗೆ ತೆರಳುತ್ತಿದ್ದ ರೈಲಿನ ಅಡಿಗೆ ಬಿದ್ದು ತಿಮ್ಮಪ್ಪ ನಾರಾಯಣ ನಾಯ್ಕ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಮೃತರ ಸಹೋದರ ಕುಮಾರ ನಾರಾಯಣ ನಾಯ್ಕ (೫೦) ಅವರು ಶನಿವಾರ ಬೆಳಗ್ಗೆ ೯.೧೫ಕ್ಕೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ತಮ್ಮನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :

ಮಾರುಕೇರಿಯಲ್ಲಿ ಪ್ರಜಾಸೇವೆ ಆಂದೋಲನ: ರಸ್ತೆ, ಆರೋಗ್ಯ, ಬಸ್, ನೀರು ಸೇರಿದಂತೆ ಹಲವು ಸಮಸ್ಯೆಗಳ ಪ್ರಸ್ತಾಪ

ವಿಟಿಯು ರ‍್ಯಾಂಕ್‌ನೊಂದಿಗೆ ಮತ್ತೊಮ್ಮೆ ಮಿಂಚಿದ ಎಐಟಿಎಂ; ಮೊಹಮದ್ ಫಹಾದ್‌ಗೆ 6ನೇ ರ‍್ಯಾಂಕ್

ಮುಟ್ಟಳ್ಳಿಯಲ್ಲಿ ಸೆ ೨೭ರಂದು ಬೃಹತ್ ರಕ್ತದಾನ ಶಿಬಿರ