ಭಟ್ಕಳ ಡೈರಿ ವರದಿ

ಮಂಗಳೂರು: ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಕೊಂಕಣ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ಜಂಕ್ಷನ್ ನಡುವೆ ವಾರಾಂತ್ಯ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ ೦೬೫೯೭/೦೬೫೯೮ ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ಜಂಕ್ಷನ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ ೧ ಮತ್ತು ೪ರಂದು ಸಂಚರಿಸಲಿದೆ. ಅಕ್ಟೋಬರ್ ೧ರಂದು ರಾತ್ರಿ ೧೧:೫೦ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ರೈಲು ಸಂಖ್ಯೆ ೦೬೫೯೭, ಅಕ್ಟೋಬರ್ ೨ರಂದು ಸಂಜೆ ೬:೧೦ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ ರೈಲು ಸಂಖ್ಯೆ ೦೬೫೯೮ ಅಕ್ಟೋಬರ್ ೪ರಂದು ಬೆಳಿಗ್ಗೆ ೮:೪೦ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡಲಿದೆ. ಅದೇ ದಿನ ರಾತ್ರಿ ೧೧:೫೫ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಭಟ್ಕಳ, ಮುರ್ಡೇಶ್ವರ, ಹೊನ್ನಾವರಕ್ಕೂ ನಿಲುಗಡೆ: 

ಈ ವಿಶೇಷ ರೈಲು ಕರಾವಳಿ ಭಾಗದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಚಿಕ್ಕಬಾಣಾವರ, ಕುಣಿಗಲ್, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲ, ಕಾರವಾರ ಹಾಗೂ ಕಾಣಕೋನ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.

೨೩ ಕೋಚ್‌ಗಳ ವಿಶೇಷ ರೈಲು: ರೈಲು ಒಟ್ಟು ೨೩ ಕೋಚ್‌ಗಳನ್ನು ಹೊಂದಿರಲಿದೆ. ಇದರಲ್ಲಿ ಒಂದು ಟೂ-ಟಯರ್ ಎಸಿ ಕೋಚ್, ಮೂರು ತ್ರೀ-ಟಯರ್ ಎಸಿ ಕೋಚ್, ೧೦ ಸ್ಲೀಪರ್ ಕೋಚ್, ಏಳು ಜನರಲ್ ಕೋಚ್ ಹಾಗೂ ಎರಡು ಎಸ್‌ಎಲ್‌ಆರ್‌ಡಿ ಕೋಚ್‌ಗಳು ಇರಲಿವೆ.

ಸೆಪ್ಟೆಂಬರ್ ೩೦ರಿಂದ ಟಿಕೆಟ್ ಬುಕ್ಕಿಂಗ್:

ವಾರಾಂತ್ಯದ ವಿಶೇಷ ರೈಲಿನ ಟಿಕೆಟ್ ಕಾಯ್ದಿರಿಸುವಿಕೆ ಸೆಪ್ಟೆಂಬರ್ ೩೦ರಿಂದ ಆರಂಭವಾಗಲಿದೆ. ಪ್ರಯಾಣಿಕರು ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (ಪಿಆರ್‌ಎಸ್), ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: 

ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ: ಅ. ೨ರಂದು ಮುರುಡೇಶ್ವರ–ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ

ಭಟ್ಕಳ: ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ ವ್ಯಕ್ತಿ ನಾಪತ್ತೆ