ಭಟ್ಕಳ ಡೈರಿ ವರದಿ
ಭಟ್ಕಳ: ಧಾರ್ಮಿಕ ಭಾವನೆ, ದೈವಭಕ್ತಿ ಮತ್ತು ರಂಗಕಲೆಯನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಡುತ್ತಿರುವ ಭಟ್ಕಳದ ದೈವ ಸಂಕಲ್ಪ ಕಲಾ ಬಳಗ ಇದೀಗ ಮತ್ತೊಂದು ವಿಭಿನ್ನ ನಾಟಕದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಳಗದ ನೂತನ ನಾಟಕ ‘ಸಂಭವಾಮಿ ಯುಗೇ ಯುಗೇ’ಯ ಪೋಸ್ಟರ್ ಅನ್ನು ತಾಲೂಕಿನ ಸರ್ಪನಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.
ರಂಗಭೂಮಿ ಕಲಾವಿದ ಹಾಗೂ ನಾಟಕಕಾರ ಭಾಸ್ಕರ ನಾಯ್ಕ ಅವರ ನೇತೃತ್ವದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಾಟಕದ ಕಥೆ, ರಚನೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಭಾಸ್ಕರ ನಾಯ್ಕ ಅವರೇ ವಹಿಸಿಕೊಂಡಿದ್ದಾರೆ.
ಈ ಹಿಂದೆ ‘ದೈವ ಸಂಕಲ್ಪ’ ಹೆಸರಿನ ನಾಟಕದ ಮೂಲಕ ಭಟ್ಕಳದ ರಂಗಾಸಕ್ತರ ಗಮನ ಸೆಳೆದಿದ್ದ ಕಲಾ ಬಳಗ, ಇದೀಗ ‘ಸಂಭವಾಮಿ ಯುಗೇ ಯುಗೇ’ ಮೂಲಕ ಮತ್ತೊಂದು ವಿಭಿನ್ನ ರಂಗಪ್ರಯೋಗಕ್ಕೆ ಮುಂದಾಗಿದೆ.
‘ದೈವ ಸಂಕಲ್ಪ’ ನಾಟಕದಲ್ಲಿನ ಕಥಾವಸ್ತು, ಪಾತ್ರಗಳ ನಿರೂಪಣೆ ಹಾಗೂ ಕಲಾವಿದರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಯಶಸ್ಸಿನ ಬಳಿಕ ಹೊಸ ನಾಟಕದ ಬಗ್ಗೆ ಅಭಿಮಾನಿಗಳಲ್ಲೂ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ಹೊಸ ಕಥಾವಸ್ತು, ವಿಭಿನ್ನ ನಿರೂಪಣೆ ಹಾಗೂ ಅನುಭವಿ ಕಲಾವಿದರ ಅಭಿನಯದೊಂದಿಗೆ ‘ಸಂಭವಾಮಿ ಯುಗೇ ಯುಗೇ’ ನಾಟಕ ರೂಪುಗೊಳ್ಳುತ್ತಿದೆ. ಸರ್ಪನಕಟ್ಟೆಯಲ್ಲಿ ಪೋಸ್ಟರ್ ಬಿಡುಗಡೆಯಾಗಿರುವುದು ನಾಟಕದ ಪ್ರದರ್ಶನದ ಕುರಿತು ರಂಗಾಸಕ್ತರಲ್ಲಿ ಕುತೂಹಲ ಮೂಡಿಸಿದೆ.
ದೈವಭಕ್ತಿ ಮತ್ತು ರಂಗಕಲೆಯ ಸಮ್ಮಿಲನದ ಮೂಲಕ ‘ಸಂಭವಾಮಿ ಯುಗೇ ಯುಗೇ’ ನಾಟಕವೂ ಪ್ರೇಕ್ಷಕರ ಮನ ಗೆದ್ದು, ದೈವ ಸಂಕಲ್ಪ ಕಲಾ ಬಳಗದ ಕಲಾಯಾತ್ರೆಗೆ ಮತ್ತಷ್ಟು ಮೆರುಗು ತರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ :
ಭಟ್ಕಳದಲ್ಲಿ ನ.೧ರಂದು ಆರ್ಎಸ್ಎಸ್ ಭವ್ಯ ಪಥಸಂಚಲನ: ಗಣವೇಷ ಖರೀದಿಗೆ ವ್ಯವಸ್ಥೆ
ಭಟ್ಕಳದ ಸಮುದ್ರ ಕಣ್ಣೀರಾಗುತ್ತಿದೆ: ಮೀನುಗಾರರ ಬದುಕಿಗೆ ಸುರಕ್ಷತೆ ಯಾವಾಗ?




