ಭಟ್ಕಳ ಡೈರಿ | ರಾಜಕೀಯ ವಿಶೇಷ ವರದಿ |
ಭಟ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಇನ್ನೂ ಸಮಯವಿದ್ದರೂ ಕಾಂಗ್ರೆಸ್ ವಲಯದಲ್ಲಿ ಈಗಿನಿಂದಲೇ ಲೆಕ್ಕಾಚಾರಗಳು ಆರಂಭವಾಗಿವೆ. ಹೊಸ ಮುಖಗಳ ಪ್ರವೇಶದ ಸಾಧ್ಯತೆ ಕಾಂಗ್ರೆಸ್ಸಿನ ರಾಜಕೀಯ ಚರ್ಚೆಗೆ ಹೊಸ ಆಯಾಮ ನೀಡಿವೆ.
ಕಾಂಗ್ರೆಸ್ ಟಿಕೆಟ್ಗೆ ವಿಕ್ರಮ ನಾಯ್ಕ ಹೆಸರು ಚರ್ಚೆಯಲ್ಲಿ:
ಈ ಬಾರಿಯ ರಾಜಕೀಯ ಬೆಳವಣಿಗೆಗಳಲ್ಲಿ ಗಮನ ಸೆಳೆಯುತ್ತಿರುವುದು ಮಾಜಿ ಶಾಸಕ ಹಾಗೂ ಮಾಜಿ ಸಚಿವ ಆರ್.ಎನ್. ನಾಯ್ಕ ಅವರ ಪುತ್ರ, ವಕೀಲ ವಿಕ್ರಮ ನಾಯ್ಕ ಅವರ ಹೆಸರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರನ್ನು ಆರ್.ಎನ್. ನಾಯ್ಕ ಮತ್ತು ವಿಕ್ರಮ ನಾಯ್ಕ ಭೇಟಿಯಾಗಿರುವುದು ಭಟ್ಕಳ-ಹೊನ್ನಾವರ ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಲು ಜನರ ಬೆಂಬಲ ಮತ್ತು ಪಕ್ಷದ ಒಪ್ಪಿಗೆ ದೊರೆತರೆ ಸಿದ್ಧನಿದ್ದೇನೆ ಎಂದು ವಿಕ್ರಮ ನಾಯ್ಕ ಹೇಳಿರುವುದಾಗಿ ವರದಿಯಾಗಿದೆ.
ಈ ಬೆಳವಣಿಗೆಯಿಂದ ಕಾಂಗ್ರೆಸ್ನೊಳಗೆ ಕುತೂಹಲ ಹೆಚ್ಚಾಗಿದೆ. ಆದರೆ, ಹೊಸ ಅಭ್ಯರ್ಥಿ ಆಯ್ಕೆ ವಿಷಯವನ್ನು ಮಂಕಾಳ ವೈದ್ಯ ಬೆಂಬಲಿಗರು ಅಪಹಾಸ್ಯ ಮಾಡುತ್ತಿದ್ದಾರೆ. ಅದು ದೂರದ ಮಾತು ಎಂದು ಅವರು ವಿಶ್ವಾಸಭರಿತರಾಗಿ ಮಾತನಾಡುತ್ತಾರೆ. ಇತ್ತ ವಿಕ್ರಂ ನಾಯ್ಕ ಬಹುಸಂಖ್ಯಾತ ನಾಮಧಾರಿ ಮತದಾರರನ್ನು ಹೊಂದಿರುವ ಸಮಾಜದ ಹಿನ್ನೆಲೆ ಉಳ್ಳವರು. ನಾಮಧಾರಿ ಸಮಾಜಕ್ಕೆ ಟಿಕೆಟ್ ನೀಡದಿದ್ದರೆ ಮತಗಳು ಒಡೆದು ಹೋಗಬಹುದು ಎಂಬುದು ಆರ್ ಎನ್ ನಾಯ್ಕರ ಬೆಂಬಲಿಗರ ಲೆಕ್ಕಾಚಾರ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ವಜಾತಿಯವರು ಎಂಬುದು ಪ್ಲಸ್ ಪಾಯಿಂಟ್.
ಆದರೂ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಸದ್ಯದಲ್ಲಿ ದೂರದ ಮಾತಾದರೂ ಹಾಲಿ ಶಾಸಕ ಮಂಕಾಳ ವೈದ್ಯರೇ ಮುಂದಿನ ಅಭ್ಯರ್ಥಿಯಾಗುತ್ತಾರೆಯೇ ಅಥವಾ ಪಕ್ಷ ಹೊಸ ಮುಖಕ್ಕೆ ಅವಕಾಶ ನೀಡುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಡಾಕ್ಟರೇಟ್ ಪದವಿ ಪಡೆದ ಭಾರತಿ ನಾಯ್ಕಗೆ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ನಿಂದ ಸನ್ಮಾನ
ಶಿರಾಲಿ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಆರೋಪ: ೨೪ ಗಂಟೆಯೊಳಗೆ ಬಂಧನಕ್ಕೆ ವೈದ್ಯಾಧಿಕಾರಿಗಳ ಆಗ್ರಹ



