ಭಟ್ಕಳ ಡೈರಿ ವರದಿ

ಭಟ್ಕಳ: ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ಎಐಟಿಎಂ) ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಐಐಟಿ ಗುವಾಹಟಿ ಆಯೋಜಿಸಿದ್ದ ‘Hackyard Build 2026’ ಹ್ಯಾಕಥಾನ್‌ನ ‘Agent 37 Challenge’ ಸ್ಪರ್ಧೆಯಲ್ಲಿ ಎಐಟಿಎಂನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡದಲ್ಲಿ ಫಕ್ಕಿಹ್ ಮೊಹಮ್ಮದ್ ಶೆಹ್ಜಾನ್, ಅಬುಬಕರ್ ಕಡ್ಲಿ, ಅಬ್ದುಲ್ ಖಾದಿರ್ ಅರ್ಹಾಮ್ ಹಾಗೂ ಮೊಹಮ್ಮದ್ ಜೈದ್ ಇದ್ದರು.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಭಟ್ಕಳದ ಎಐಟಿಎಂ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಐಟಿಎಂ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ತಾಂತ್ರಿಕ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಮಿಚಿಗನ್ ಸೆನೆಟ್ ಚುನಾವಣೆ ಮೇಲೆ ಭಟ್ಕಳದ ಕಣ್ಣು: ಅಭ್ಯರ್ಥಿ ಪತ್ನಿಯ ತವರೂರು ಇಲ್ಲೇ!

“ಪದಕ ಗೆದ್ದವರು ವಿದ್ಯಾರ್ಥಿಗಳು; ಅದರ ಹಿಂದೆ ಬೆವರಿತ್ತು ಈ ಗುರುದೇವರದ್ದು!”