ಭಟ್ಕಳ ಡೈರಿ ವರದಿ

ಮುರ್ಡೇಶ್ವರ: ಸಮುದ್ರ ತೀರದಲ್ಲಿ ಭಕ್ತಿಭಾವದ ಸೊಬಗು, ಧಾರ್ಮಿಕ ವಿಧಿವಿಧಾನಗಳ ಸಂಭ್ರಮದೊಂದಿಗೆ ಸಮುದ್ರ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ ೧೪ರ ಶನಿವಾರದಂದು ಮುರ್ಡೇಶ್ವರ ದೇವಸ್ಥಾನ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ ೯.೩೦ರಿಂದ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಬಳಿಕ ಶ್ರೀ ಮುರ್ಡೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಮಹಾಪೂಜೆ ನೆರವೇರಲಿದೆ. ಸಂಜೆ ೬ ಗಂಟೆಗೆ ಪ್ರಮುಖ ಆಕರ್ಷಣೆಯಾದ ‘ಸಮುದ್ರ ಆರತಿ’ ನಡೆಯಲಿದೆ. ಇದರೊಂದಿಗೆ ಸಮುದ್ರಕ್ಕೆ ನವಧಾನ್ಯ ಸಮರ್ಪಣೆ ಕಾರ್ಯಕ್ರಮವೂ ಜರುಗಲಿದೆ.

ಸಮುದ್ರ ತೀರದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಭಟ್ಕಳ ಮತ್ತು ಸುತ್ತಮುತ್ತಲಿನ ಕರಾವಳಿ ಭಾಗದ ಧಾರ್ಮಿಕ ಆಸಕ್ತರಿಗೆ ಸಮುದ್ರ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇದೊಂದು ಉತ್ತಮ ಅವಕಾಶವಾಗಲಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಮುರುಡೇಶ್ವರ ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ಆಗಮನ: ಸ್ವಾಗತಕ್ಕೆ ಸಜ್ಜಾದ ಬಿಜೆಪಿ

ಮೂರು ವರ್ಷಗಳ ಬಳಿಕ ಪೂರ್ಣಗೊಳ್ಳುವ ಹಂತದಲ್ಲಿ ಭಟ್ಕಳದ ಎರಡನೇ ೧೧೦ ಕೆವಿ ವಿದ್ಯುತ್ ಉಪಕೇಂದ್ರ