ಕಾರವಾರ: ಭಟ್ಕಳ ಶಾಸಕ (Bhatkal MLA ಹಾಗೂ ಮಾಜಿ ಸಚಿವ (former minister) ಮಂಕಾಳ ವೈದ್ಯ (Mankal Vaidya) ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ (cabinet) ಸಚಿವ ಸ್ಥಾನ (ministerial post) ನೀಡುವಂತೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮೀನುಗಾರ ಮುಖಂಡರು (fishermen leaders) ಆಗ್ರಹಿಸಿದ್ದಾರೆ. ಕಾರವಾರದಲ್ಲಿ (Karwar) ಸುದ್ದಿಗೋಷ್ಠಿ (pressmeet) ನಡೆಸಿದ ಮುಖಂಡರು, ಮಂಕಾಳ ವೈದ್ಯರಿಗೆ (Mankal Vaidya) ಸಚಿವ ಸ್ಥಾನ ನೀಡದೇ ಇರುವುದು ಮೀನುಗಾರ ಸಮುದಾಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಚಿವರ ಪಟ್ಟಿಯಲ್ಲಿ ಮೊದಲಿಗೆ ಮಂಕಾಳ ವೈದ್ಯರ ಹೆಸರು ಸೇರಿಸಿ ಬಳಿಕ ಕೈಬಿಟ್ಟಿರುವುದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ (Congress MLA) ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿ. ಸರ್ಕಾರ (government) ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೀನುಗಾರ ಸಮುದಾಯದಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

Open letter/ ಡಿಕೆಶಿಗೆ ಬಹಿರಂಗ ಪತ್ರ ಬರೆದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ: ಪತ್ರದಲ್ಲೇನಿದೆ ಗೊತ್ತಾ?