ಮಂಗಳೂರು : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಚಿನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳದ ಏಳು ಮೀನುಗಾರರಿಗೆ ಜಾಮೀನು
ಮಾರ್ಚ್ 19 ರಂದು ದುಬೈನಿಂದ ಪ್ರಯಾಣಿಸುತ್ತಿದ್ದ ಭಟ್ಕಳ ಮೂಲದ ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು 6,19,200 ರೂಪಾಯಿ ಮೌಲ್ಯದ 96 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಎರಡು ಪದರದ ಬ್ರೌನ್ ಪೇಪರ್ ಹಾಳೆಗಳ ನಡುವೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟು ಟ್ರಾಲಿ ಬ್ಯಾಗ್ನಲ್ಲಿ ತರಲಾಗುತ್ತಿತ್ತು. ಬ್ಯಾಗ್ ಸ್ಕ್ಯಾನಿಂಗ್ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದ್ದು, ಬ್ಯಾಗ್ ತೆರೆದು ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ವಿಡಿಯೋ ನೋಡಿ : ಮಿರ್ಚಿ ಭಜಿ, ಮಂಡಕ್ಕಿ ಸವಿದ ಹ್ಯಾಟ್ರಿಕ್ ಹೀರೊ https://fb.watch/qXWLrgv-6-/?mibextid=Nif5oz