ಭಟ್ಕಳ: ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಯಾಣಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ : ವಾಟರ್ ಟ್ಯಾಂಕಿನಲ್ಲಿ ಶವ ಪತ್ತೆ : ನೀರು ಕುಡಿದ ಜನರು ಕಕ್ಕಾಬಿಕ್ಕಿ !

ಆರೋಪಿಯನ್ನು ಹೊನ್ನಾವರ ಮೂಲದ ಸುಬ್ರಹ್ಮಣ್ಯ ಈರಾ ಗೌಡ (35) ಎಂದು ಗುರುತಿಸಲಾಗಿದೆ. ಈತ ಮಲ್ಪೆಯಲ್ಲಿ ಬೋಟ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ವಿಡಿಯೋ ನೋಡಿ : ಭಟ್ಕಳದಲ್ಲಿ ಬಿಜೆಪಿ ಮಹಿಳಾ‌ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ
ಉಡುಪಿ ಆಸ್ಪತ್ರೆಗೆ ಹೋಗಿದ್ದ ಮಹಿಳೆಯೋರ್ವಳು ಗುರುವಾರದಂದು ತಡರಾತ್ರಿ ಖಾಸಗಿ ಬಸ್‌ನಲ್ಲಿ ತನ್ನ 14 ವರ್ಷದ ಮಗಳೊಂದಿಗೆ ಭಟ್ಕಳಕ್ಕೆ ಹಿಂತಿರುಗುತ್ತಿದ್ದರು. ಪ್ರಯಾಣದ ವೇಳೆ ಆರೋಪಿ ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಮಹಿಳೆ ಮಧ್ಯಪ್ರವೇಶಿಸಿದಾಗ ಆಕೆಯ ಬಳಿಯೂ ಆತ ಅನುಚಿತವಾಗಿ ವರ್ತಿಸಿದ್ದಾನೆ. ಬಸ್ಸಿನಲ್ಲಿದ್ದಾಗಲೇ ಮಹಿಳೆ ಭಟ್ಕಳದಲ್ಲಿರುವ ತನ್ನ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಭಟ್ಕಳ ತಲುಪಿದಾಗ ಸ್ಥಳೀಯರು ಬಸ್ಸಿನ ಸುತ್ತ ಜಮಾಯಿಸಿ ಆರೋಪಿಯನ್ನು ಹಿಡಿದು ಭಟ್ಕಳ ಪೊಲೀಸರಿಗೆ ಒಪ್ಪಿಸಿದ್ದಾರೆ.


ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಭಟ್ಕಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಕಾರವಾರ ಜೈಲಿಗೆ ರವಾನಿಸಲಾಗಿದೆ.