ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು.

ಇದನ್ನೂ ಓದಿ : ಜನರ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ : ಮಂಕಾಳ ವೈದ್ಯ

ಇದೇ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ನಿಶ್ಚಲಾನಂದನಾಥ ಸ್ವಾಮೀಜಿ ದೂರವಾಣಿ ಕರೆ ಮಾಡಿ ಡಾ.ಅಂಜಲಿ ಅವರಿಗೆ ನೀಡಿದರು. ಅವರೊಂದಿಗೂ ಮಾತನಾಡಿದ ಡಾ.ನಿಂಬಾಳ್ಕರ್, ಅವರ ಆಶೀರ್ವಾದವನ್ನೂ ಕೇಳಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬಳಿಕ ಕೆಲ ಹೊತ್ತು ನಿಶ್ಚಲಾನಂದನಾಥರು ಡಾ.ಅಂಜಲಿ ಹಾಗೂ ಇತರ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಕುರಿತು ಹಾಗೂ ಕಾಂಗ್ರೆಸ್ ಪ್ರಚಾರದ ವೈಖರಿಗಳ ಬಗ್ಗೆ ಮಾಹಿತಿ ಪಡೆದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಡಾ.ಅಂಜಲಿ ಅವರಿಗೆ ಸ್ವಾಮೀಜಿ ಸೂಚಿಸಿದರು. ಗ್ಯಾರಂಟಿ ಯೋಜನೆ ಬಗ್ಗೆ ಜನರಲ್ಲಿರುವ ಉತ್ತಮ ಅಭಿಪ್ರಾಯಗಳ ಬಗ್ಗೆಯೂ ಸ್ವಾಮೀಜಿಯವರು ಮಾತನಾಡಿದರು. ಶಾಲು ಹೊದಿಸಿ ಸನ್ಮಾನಿಸಿ, ಉಡಿ- ಪ್ರಸಾದ ನೀಡಿ ಅನುಗ್ರಹಿಸಿದರು. ತಮ್ಮ ಸೇವೆ ಎಲ್ಲಾ‌ ಜನಕ್ಕೂ ಸಿಗುವಂತಾಗಲಿ ಎಂದು ಆಶೀರ್ವದಿಸಿದರು. ಸಂಸದರಾದ ಮೇಲೆ ಮತ್ತೆ ಬನ್ನಿ ಎಂದು ಹೇಳಿ ಕಳುಹಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಪ್ರಮುಖರಾದ ಭಾಸ್ಕರ್ ಪಟಗಾರ, ಪ್ರದೀಪ್ ನಾಯಕ ದೇವರಬಾವಿ, ಭುವನ್ ಭಾಗ್ವತ್, ಸತೀಶ್ ನಾಯ್ಕ, ಗೋಪಾಲಕೃಷ್ಣ ನಾಯಕ ಮುಂತಾದವರಿದ್ದರು.