ಶಿರಸಿ : ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಶಿರಸಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ನಾಲ್ವರು ವಿಶೇಷ ವ್ಯಕ್ತಿಗಳ ಭೇಟಿ ಮಾಡಿ, ಶುಭಹಾರೈಸಿದ್ದಾರೆ. ಅವರ‌್ಯಾರು ಗೊತ್ತಾ? ಈ ವರದಿ ನೋಡಿ…

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹೌದು… ಉತ್ತರಕನ್ನಡ ಮತ್ತು ಧಾರವಾಡ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶಿರಸಿಗೆ ಆಗಮಿಸಿದ್ದರು. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭರ್ಜರಿ ಭಾಷಣ ಮಾಡಿದರು. ಇದಕ್ಕೂ ಪೂರ್ವ ಹೆಲಿಕಾಪ್ಟರ್ ನಲ್ಲಿ ಕ್ರೀಡಾಂಗಣಕ್ಕೆ ಬಂದಿಳಿಯುತ್ತಿದ್ದಂತೆ ಹಲವು ಬಿಜೆಪಿ ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ನಾಲ್ವರು ವಿಶೇಷ ವ್ಯಕ್ತಿಗಳ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು ಆ ನಾಲ್ವರ ಬಗ್ಗೆ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ತಮ್ಮ‌ ಸಾಮಾಜಿಕ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಫ್ರೀ ಟಿಕೇಟ್ ಆಫರ್ ನೀಡಿದ ಮುಸ್ಲಿಮ್ ಜಮಾತ್‌ಗಳು

ಲಕ್ಷ್ಮಣ ನಾಯ್ಕ ದೊಂಬೆ, ಸಿದ್ದಾಪುರ
ಮರಕಡಿಯುವವರು ಮತ್ತು ಅಯೋಧ್ಯೆಯ ಕರಸೇವಕರು. ಅಯೋಧ್ಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬ್ರಹ್ಮಚಾರಿಯಾಗಿ ಉಳಿದಿದ್ದಾರೆ. ಅವರು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರವನ್ನು ನಿರ್ಮಿಸುವವರೆಗೂ  ಕ್ಷೌರ ಮಾಡಿಸುವದಿಲ್ಲ ಎನ್ನುವ ವ್ರತ ಕೈಗೊಂಡವರು.

ರಾಧಾ ಹರಿಜನ, ಶಿರಸಿ
ನಿವೃತ್ತ ಪೌರ ಕಾರ್ಮಿಕ ಮಹಿಳೆ. ಸ್ವಚ್ಚತಾ ಕಾರ್ಯಕರ್ತೆಯಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದವರು. ತಮ್ಮ ಪ್ರಾಮಾಣಿಕ ಕೆಲಸಕ್ಕೆ ಹೆಸರುವಾಸಿಯಾಗಿರುವವರು.

ಮೋಹಿನಿ ಗೌಡ, ಅಂಕೋಲಾ
ಹಾಲಕ್ಕಿ ಪಂಗಡಕ್ಕೆ ಸೇರಿದವರು. ಇವರು ಜೀವನಕ್ಕಾಗಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಕಾಡು ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಸ್ವಚ್ಛ ಭಾರತ್ ಸ್ವಯಂಸೇವಕಿಯಾಗಿ ತೊಡಗಿಸಿಕೊಂಡಿದ್ದಾರೆ. ಅವರು ಬಿಡುವಿದ್ದಾಗಲೆಲ್ಲಾ ಬಸ್ ನಿಲ್ದಾಣ ಸ್ವಚ್ಛಗೊಳಿಸುತ್ತಾರೆ.

ನಾಗೇಶ ಮಹಾಲೆ, ಅಂಕೋಲಾ
ಕ್ಷೌರಿಕರು, ಅಂಕೋಲಾದಲ್ಲಿ 4 ಆಸನ ಸಾಮರ್ಥ್ಯದ ಸಲೂನ್ ಹೊಂದಿದ್ದಾರೆ.  ಬಿಜೆಪಿಯ ಕಟ್ಟಾ ಬೆಂಬಲಿಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿ.  ಅವರ ಕೈಯಲ್ಲಿ ಮೋದಿ ಟ್ಯಾಟೂ ಇದೆ. ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ ಅವರು ಇಡೀ ದಿನ ಉಚಿತವಾಗಿ ಕ್ಷೌರ ಮಾಡುತ್ತಾರೆ.