ಭಟ್ಕಳ:  ನೇಪಾಳದ ಕಠ್ಮಂಡುವಿನಲ್ಲಿ  ಭಾರತವನ್ನು ಪ್ರತಿನಿಧಿಸಿ ಚಿನ್ನದ ಬೇಟೆಯಾಡಿದ ಇಲ್ಲಿನ ಶೊಟೋಕಾನ್ ಕರಾಟೆ ಶಾಲೆಯ  ೫ ವಿದ್ಯಾರ್ಥಿಗಳನ್ನು ಭಟ್ಕಳದಲ್ಲಿ ನಾಗರಿಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಸಂಶುದ್ದೀನ್ ಸರ್ಕಲ್ ನಲ್ಲಿ ಅದ್ದೂರಿ ಸ್ವಾಗತ ನೀಡಿದರು.

ನೇಪಾಳದ ಕಠ್ಮಂಡುವಿನಲ್ಲಿ ಜ.೨೮ ರಿಂದ ಜ.೩೦ರ ವರೆಗೆ ನಡೆದ ಸ್ಪರ್ಧೆಯಲ್ಲಿ ಶ್ರೀಲಂಕಾ, ಪಾಕಿಸ್ತಾನ, ಭೂತಾನ, ಬಾಂಗ್ಲಾದೇಶ ಮತ್ತು ಭಾರತದಿಂದ ಒಟ್ಟು ೩೫೦ ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾರತದಿಂದ ಒಟ್ಟು ೨೭ ಕ್ರೀಡಾಪಟುಗಳು ಭಾಗವಹಿಸಿದ್ದು, ಅದರಲ್ಲಿ ಕರ್ನಾಟಕದಿಂದ ಐವರು ಕ್ರೀಡಾಳುಗಳು ಇದ್ದರು. ಭಟ್ಕಳ ಪಟ್ಟಣದ ಆರ್ಯನ್ ವಾಸುದೇವ ನಾಯ್ಕ, ಮಂಜುನಾಥ ಗಜಾನನ ದೇವಡಿಗ, ಪ್ರವೀಣ ಹರಿಜನ, ಭರಣಿ ಆದಿದ್ರಾವಿಡ, ತೇಜಸ್ವಿ ಮೊಗೇರ ಈ ಐದು ಜನ ವಿದ್ಯಾರ್ಥಿಗಳು  ಪ್ರಥಮ ಸ್ಥಾನಿಯಾಗಿ ಜಯಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ವಿಡಿಯೋ ನೋಡಿ: https://fb.watch/q3qYvhA5Y9/?mibextid=Nif5oz

ಇವರು ಭಟ್ಕಳಕ್ಕೆ ಆಗಮಿಸುತ್ತಿರುವಂತೆ ಭಟ್ಕಳದ ನಾಗರಿಕರು, ಸಂಘ ಸಂಸ್ಥೆಯ ಪ್ರಮುಖರು ಅದ್ದೂರಿಯ ಸ್ವಾಗತ ನೀಡಿದ್ದಾರೆ. ಚಂಡೆ ವಾದ್ಯಗಳಿಂದ ಬರಮಾಡಿಕೊಂಡು ಕರಾಟೆ ಶಾಲೆಯ ವಿದ್ಯಾರ್ಥಿಗಳು ಇವರೊಂದಿಗೆ ಜಾಥಾ ನಡೆಸಿದರು. ಸಂಶುದ್ದೀನ ಸರ್ಕಲಿನಿಂದ ಆರಂಭವಾದ ಮೆರವಣಿಗೆ ಹಳೆ ಬಸ್ ನಿಲ್ದಾಣದ ಮೂಲಕ ಸಾಗಿ ಬಳಿಕ ವಿದ್ಯಾಭಾರತಿ ಶಾಲೆಯ ಬಳಿಗೆ ಸಾಗಿ ಬಂತು.

ಇದನ್ನೂ ಓದಿ: ಕೆವಿಜಿ ಬ್ಯಾಂಕ್ ನಿಂದ ಪ್ರತಿಭಾ ಪುರಸ್ಕಾರ