ಭಟ್ಕಳ(Bhatkal): ತಾಲೂಕಿನ ಕುಗ್ರಾಮದ ಪ್ರತಿಭೆ (Village talent) ಕಾವ್ಯಶ್ರೀ ಕುಪ್ಪಯ್ಯ ಗೊಂಡ ಅಮೇರಿಕನ್ ಕೆಮಿಕಲ್ ಸೊಸೈಟಿ ಫಾಲ್ ಕಾನ್ಫರೆನ್ಸ್ ಹಾಜರಾಗಲು ಅಮೇರಿಕಾಕ್ಕೆ ತೆರಳುತ್ತಿದ್ದಾರೆ. ಆಗಸ್ಟ್ ೧೮ ರಿಂದ ೨೨ರ ತನಕ ಡೆನ್ವರ್ ಕೊಲೊರಾಡೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಕಾನ್ಫರೆನ್ಸ್ ನಲ್ಲಿ ಇವರು ಭಾಗವಹಿಸುತ್ತಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾನ್ಫರೆನ್ಸ್ ನಲ್ಲಿ ಪ್ರಪಂಚದಾದ್ಯಂತದ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ರಸಾಯನ ಶಾಸ್ತ್ರಜ್ಞರು, ರಾಸಾಯನಿಕ ಎಂಜಿನಿಯರ್ಗಳು, ಶಿಕ್ಷಣ ತಜ್ಞರು, ಪದವಿ ಮತ್ತು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು ಹಾಗೂ ಇತರ ವೃತ್ತಿಪರರು ಸೇರಿದಂತೆ ರಾಸಾಯನಿಕ ವೃತ್ತಿಪರರು ಕೂಡಾ ಭಾಗವಹಿಸಲಿದ್ದಾರೆ. ಕಾರ್ಯಾಗಾರವು ತಾಂತ್ರಿಕ ಅವಧಿಗಳು, ವೃತ್ತಿ ಅಭಿವೃದ್ಧಿ ಅವಕಾಶಗಳು ಮತ್ತು ನೆಟ್ವರ್ಕಿಂಗ್ ವಿಷಯಗಳನ್ನು ಒಳಗೊಂಡಿದೆ. ಸಂಶೋಧಕರು ತಮ್ಮ ಕೆಲಸವನ್ನು ಹಂಚಿಕೊಳ್ಳಲು ಮತ್ತು ಇತರರೊಂದಿಗೆ ಸಹಯೋಗಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಸಾತ್ವಿಕ ಸುಖ ಶಾಶ್ವತ: ರಾಘವೇಶ್ವರ ಶ್ರೀ
ಭಟ್ಕಳ (Bhatkal) ತಾಲೂಕಿನ ಒಂದು ಚಿಕ್ಕ ಹಳ್ಳಿಯಾದ ಬೇಸೆಯಿಂದ ಅಮೇರಿಕ (America) ತನಕ ಗ್ರಾಮೀಣ ಪ್ರತಿಭೆ (Village talent) ಪ್ರಯಾಣ ಬೆಳೆಸಿರುವುದು ಭಟ್ಕಳಕ್ಕೆ ಹೆಮ್ಮೆಯ ವಿಷಯವಾಗಿದೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾಕೊಡ್ಲು ಸರಕಾರಿ ಶಾಲೆಯಲ್ಲಿ ಪೂರೈಸಿದ ಇವರು, ಭಟ್ಕಳ ನಗರದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದಾರೆ. ಸಿದ್ಧಾರ್ಥ ಕಾಲೇಜಿನಲ್ಲಿ ಪಿ.ಯು.ಸಿ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಿದ್ದಾರೆ. ನಂತರ ಕುಂದಾಪುರ (kundapura) ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮತ್ತು ಉಜಿರೆಯ ಎಸ್ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : ಆಗಸ್ಟ್ ೧೨ರಂದು ವಿವಿಧೆಡೆ ಅಡಿಕೆ ಧಾರಣೆ
ಪ್ರಸ್ತುತ ಕಾವ್ಯಶ್ರೀ ಅವರು ಮಂಗಳೂರು (Mangaluru) ವಿಶ್ವವಿದ್ಯಾಲಯದಲ್ಲಿ ಡಾ. ಎಂ.ಆರ್.ಮದ್ದಾನಿ ಅವರ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರದಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ. ೨೦೧೯ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗಕ್ಕೆ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದರು. ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಇವರ ಎರಡು ಲೇಖನಗಳು ಈಗಾಗಲೇ ಪ್ರಕಟಗೊಂಡಿವೆ.
ಇದನ್ನೂ ಓದಿ : ಮುಂದುವರಿದ ರೈಲು ಸಂಚಾರ ರದ್ದು
ಭಟ್ಕಳ ಹಾಗೂ ಕುಂದಾಪುರ ನ್ಯಾಯಾಲಯದಲ್ಲಿ ದಲಾಯಿತರಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಬೇಸೆಯ ಕುಪ್ಪಯ್ಯ ಗೊಂಡ ಹಾಗೂ ಲಕ್ಷ್ಮಿ ಗೊಂಡ ದಂಪತಿಯ ಪುತ್ರಿ ಕಾವ್ಯಶ್ರೀ ಕಳೆದ ಫೆಬ್ರವರಿಯಲ್ಲಿ ಅಬುಧಾಬಿಯ (abudhabi) ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ network university) ಸಂಶೋಧನಾ ಕಾರ್ಯವನ್ನು ಪ್ರಸ್ತುತಪಡಿಸಿದ್ದರು. ಇವರು ವಿದೇಶ ಪ್ರವಾಸಕ್ಕೆ ಸಚಿವ ಮಂಕಾಳ ವೈದ್ಯ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.