ಭಟ್ಕಳ (Bhatkal) : ಅಂತಾರಾಷ್ಟ್ರೀಯ ಕಡಲ ಸ್ವಚ್ಛತಾ (International Sea Cleanup) ದಿನ ಹಿನ್ನೆಲೆಯಲ್ಲಿ ಆರೋಗ್ಯ ಭಾರತಿ ಮತ್ತು ಜಾಲಿಯ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ಸಹಭಾಗಿತ್ವದಲ್ಲಿ ರವಿವಾರ ಬೆಳಿಗ್ಗೆ ಜಾಲಿ ಸಮುದ್ರ ತೀರವನ್ನು ಸ್ವಚ್ಛ ಮಾಡುವ (cleanliness) ಮೂಲಕ ಶ್ರಮದಾನ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯುವಕ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿ ಸಮುದ್ರದ ದಂಡೆಯಲ್ಲಿ ಇರುವ ಕಸಕಡ್ಡಿ, ತ್ಯಾಜ್ಯವಸ್ತುಗಳನ್ನು ಸ್ವಚ್ಛಗೊಳಿಸಿದರು (cleanliness). ಜೊತೆಗೆ ಅಲ್ಲೇ ನೆರೆದಿದ್ದ ಸ್ಥಳೀಯ ಶಾಲೆ ಯುವಕರಿಗೆ ಪ್ಲಾಸ್ಟಿಕ್ ಬಳಕೆ ಹಾಗೂ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬ ಕುರಿತು ಮಾಹಿತಿ ನೀಡಿದರರು.  ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆಗೊಳಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಎಂಬ ಸಂದೇಶ ನೀಡಿದರು.

ಇದನ್ನೂ ಓದಿ :  ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ

ಈ ಯಶಸ್ವಿ ಕಾರ್ಯಕ್ರಮಕ್ಕೆ  ಸ್ವಚ್ಛ ಭಾರತ್ ಮಿಷನ್ ವತಿಯಿಂದ ಜಾಲಿ ಪಟ್ಟಣ ಪಂಚಾಯಿತಿಯು ವಾಹನ ಸೇವೆ ಜೊತೆಗೆ ಗ್ಲೌಸ್ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿದ್ದರು. ಜಾಲಿ ಪಟ್ಟಣ ಪಂಚಾಯತಿ ಸದಸ್ಯರಾದ ದಯಾನಂದ ನಾಯ್ಕ, ಯುವಕ ಸಂಘದ ಅಧ್ಯಕ್ಷ ಸಂಕೇತ ಆಚಾರ್ಯ, ಗಜು ನಾಯ್ಕ, ವಸಂತ ನಾಯ್ಕ ಇತರ ಪ್ರಮುಖರು ಭಾಗಿಯಾಗಿದ್ದರು.

ವಿಡಿಯೋ ಸಹಿತ ಇದನ್ನೂ ಓದಿ :  ಕಾರವಾರದಲ್ಲಿ ಪುಣೆ ಉದ್ಯಮಿಯ ಭೀಕರ ಕೊಲೆ