ಕುಮಟಾ (Kumta): ವಿಶ್ವ ವಿಖ್ಯಾತ ಮೈಸೂರು ದಸರಾ (Mysore Dussehra) ಆಚರಣೆಯ ಪ್ರಯುಕ್ತ ಉತ್ತರ ಕನ್ನಡ (Uttara Kannada) ಜಿಲ್ಲೆಯಿಂದ ಪ್ರದರ್ಶಿಸಬೇಕಾದ ಸ್ತಬ್ದಚಿತ್ರ ನಿರ್ಮಾಣ, ಜಂಬೂ ಸವಾರಿಯಲ್ಲಿ ಭಾಗವಹಿಸುವಿಕೆ ಮತ್ತು ಸಂಪೂರ್ಣ ದಸರಾ ಮಹೋತ್ಸವ ಪ್ರಕ್ರಿಯೆ ಮುಕ್ತಾಯಗೊಳ್ಳುವರೆಗೆ ಜಿಲ್ಲೆಯಿಂದ ಪ್ರತಿನಿಧಿಸಲು ಚಿತ್ರಕಲಾ ಶಿಕ್ಷಕ ಮಹೇಶ ಎನ್. ಆಚಾರಿ ನೇಮಕಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಚಿಕತ್ರಕಲಾ ಶಿಕ್ಷಕ ಮಹೇಶ ಎನ್ ಆಚಾರಿಯವರನ್ನು ಉತ್ತರಕನ್ನಡ ಜಿಲ್ಲಾಡಳಿತ ನೋಡಲ್ ಅಧಿಕಾರಿಯಾಗಿ (Nodal Officer) ನಿಯೋಜಿಸಿದೆ. ಮಹೇಶ ಆಚಾರಿ ಉದಯೋನ್ಮುಖ ಚಿತ್ರಕಲಾವಿದರು. ಇವರ ಕುಂಚದಿಂದ ಬಿಡಿಸಿದ ಅನೇಕ ಕಲಾಕೃತಿಗಳಿಗೆ ಈಗಾಗಲೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಇದನ್ನೂ ಓದಿ :  ಸೆಪ್ಟೆಂಬರ್‌ ೨೪ರಂದು ವಿವಿಧೆಡೆ ಅಡಿಕೆ ಧಾರಣೆ