ಬೈಂದೂರು (Bynd00r) : ಮೀನು (fish) ಸಾಗಿಸಲು ವಿನ್ಯಾಸಗೊಳಿಸಿದ ಇನ್ಸುಲೇಟೆಡ್ ವಾಹನದಲ್ಲಿ ಜಾನುವಾರುಗಳನ್ನು (cattle) ಸಾಗಿಸಲು ಯತ್ನಿಸಿದ ಘಟನೆ ಶಿರೂರು ಕರಿಕಟ್ಟೆ ಬಳಿ ಬೆಳಕಿಗೆ ಬಂದಿದೆ. ವಾಹನ ಪಲ್ಟಿಯಿಂದ (Vehicle topples) ಈ ಅಕ್ರಮ ಪತ್ತೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ತಾಲೂಕಿನಿಂದ ಬೈಂದೂರಿಗೆ ತೆರಳುತ್ತಿದ್ದ ಉಡುಪಿ ನೋಂದಣಿಯ ವಾಹನದಲ್ಲಿ ಮೀನಿನ ಟ್ರೇಗಳನ್ನು ತುಂಬಿಕೊಂಡು, ಮಧ್ಯೆ ಜಾನುವಾರುಗಳನ್ನು ಹಾಕಲಾಗಿತ್ತು. ಕರಿಕಟ್ಟೆಯ ದುರ್ಗಾಂಬಿಕಾ ಹಳ್ಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ವಾಹನ ಉರುಳಿ ಬಿದ್ದಿದೆ (Vehicle topples). ವಾಹನ ಪಲ್ಟಿಯಾಗಿದ್ದರಿಂದ ಮೀನಿನ ಸಮೇತ ದನ ಸಾಗಿಸುತ್ತಿದ್ದ ದೃಶ್ಯ ಕಂಡುಬಂತು. ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಜ್ವರ ಬಂದಿದ್ದಕ್ಕೆ ಗುಳಿಗೆ ತಿಂದ ಮೀನುಗಾರ ಕೊನೆಯುಸಿರು