ಉಡುಪಿ (Udupi) : ಗೋವಾ ಮದ್ಯ (Goan liquor) ಸಾಗಾಟ ಆರೋಪದ ಮೇಲೆ ಉಡುಪಿ ತಾಲೂಕಿನ ಆದಿ ಉಡುಪಿ ನಿವಾಸಿ ಪ್ರಶಾಂತ ಸುವರ್ಣ ಎಂಬಾತನನ್ನು ಕಾರವಾರದಲ್ಲಿ (Karwar) ಬಂಧಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಕಳ (Karkala) ತಾಲೂಕಿನ ಬೋಳ ಗ್ರಾಮದ ಮಾರಿಮಾರು ನಿವಾಸ ಹಾಗೂ ಅಬ್ಯನಡ್ಕದ ‘ಅವನಿ ನಿಲಯ’ ಮನೆಯ ಆವರಣದಿಂದ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮನ್ವಯದಿಂದ ಕಾರವಾರ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಶ್ರೀ ಶೆಜ್ಜೇಶ್ವರ ದೇವರ ಅದ್ಧೂರಿ ಕಾರ್ತಿಕೋತ್ಸವ
ಬಂಧನದ ನಂತರ ಸುವರ್ಣ ಅವರನ್ನು ಉಡುಪಿಗೆ ಕರೆತಂದು ಪ್ರಥಮ ದರ್ಜೆ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ವೇಳೆ ಗೋವಾ ಮದ್ಯ (Goan liquor) ಸಾಗಾಟ ಪ್ರಕರಣದ ಇನ್ನೋರ್ವ ಆರೋಪಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಬ್ಯನಡ್ಕ ಬೋಳ ಗ್ರಾಮದ ಅವನಿ ನಿಲಯ ನಿವಾಸಿ ಅವಿನಾಶ ಮಲ್ಲಿ ಎಂಬಾತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ : ಗ್ಯಾರಂಟಿಯಿಂದ ಅಭಿವೃದ್ಧಿ ನಿಂತಿದೆಯೆ?