ಭಟ್ಕಳ (Bhatkal) : ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜು ಸಮಗ್ರ ವೀರಾಗ್ರಣಿ (Veeragrani) ಪ್ರಶಸ್ತಿಯನ್ನು ಸತತ ಎರಡನೇ ವರ್ಷ ಪಡೆದುಕೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಥಮ ಪಿ.ಯು.ಸಿ. ವಿಭಾಗದಲ್ಲಿ ಅಂಕಿತಾ ಕಾಮತ ಭಕ್ತಿಗೀತೆ ಪ್ರಥಮ, ಪೂರ್ಣ ಹೆಗಡೆ ಭಾವಗೀತೆ ಪ್ರಥಮ, ಕ್ಷಿತಿ ಜೈನ್ ಚರ್ಚಾ ಸ್ಪರ್ಧೆ (ಇಂಗ್ಲೀಷ್ ) ಪ್ರಥಮ, ಹರ್ಷಿತಾ ನಾಯ್ಕ ಆಶು ಭಾಷಣದಲ್ಲಿ ಪ್ರಥಮ, ಲಾವಣ್ಯ ದೇವಾಡಿಗ ಜಾನಪದ ಗೀತೆ ದ್ವಿತೀಯ, ಕವನಾ ಮೊಗೇರ ಚರ್ಚಾ ಸ್ಪರ್ಧೆ(ಕನ್ನಡ) ದ್ವಿತೀಯ ಹಾಗೂ ಧನ್ಯಶ್ರೀ ಏಕಪಾತ್ರಾಭಿನಯದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಇಬ್ಬರು ಮಕ್ಕಳ ಮೃತದೇಹ ಪತ್ತೆ

ದ್ವಿತೀಯ ಪಿ.ಯು.ಸಿ. ವಿಭಾಗದಲ್ಲಿ ಮಾನಸಾ ನಾಯ್ಕ (ಇಂಗ್ಲೀಷ್) ಪ್ರಬಂಧ ಪ್ರಥಮ, ಶ್ರೀರಕ್ಷಾ ಹೆಬ್ಬಾರ ಭಕ್ತಿಗೀತೆ ಪ್ರಥಮ, ಆರ್ಯಾ ಪಡಿಯಾರ ಚಿತ್ರಕಲೆ ಪ್ರಥಮ, ದೀಪಾ ನಾಯ್ಕ ಆಶುಭಾಷಣ ಪ್ರಥಮ, ನಿಖಿತಾ ಮೊಗೇರ ಕನ್ನಡ ಪ್ರಬಂಧ ಸ್ಪರ್ಧೆ ಪ್ರಥಮ, ರಶ್ಮಿ ನಾಯ್ಕ ಚರ್ಚಾ ಸ್ಪರ್ಧೆ (ಇಂಗ್ಲೀಷ್) ಪ್ರಥಮ, ಸಿಂಚನಾ ನಾಯ್ಕ ಭಾವಗೀತೆ ದ್ವಿತೀಯ, ದಿವ್ಯಾ ನಾಯ್ಕ ಚರ್ಚಾ ಸ್ಪರ್ಧೆ(ಕನ್ನಡ) ದ್ವಿತೀಯ ಹಾಗೂ ಪೂಜಾ ಶೆಟ್ಟಿ ಏಕಪಾತ್ರಾಭಿನಯದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಪಾವಿನಕುರ್ವೆ ಬಂದರು ಅಭಿವೃದ್ಧಿಗೆ ಜಾಗತಿಕ ಟೆಂಡರ್‌

ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಯಿಂದಾಗಿ‌ ಕಾಲೇಜು ಸಮಗ್ರ ವೀರಾಗ್ರಣಿ (Veeragrani) ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ. ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ, ಮಹಾವಿದ್ಯಾಲಯದ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಉಪನ್ಯಾಸಕ ನಾಗೇಂದ್ರ ಪೈ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಮೀನು ಹಿಡಿಯಲು ಹೋಗಿದ್ದ ತಂದೆ, ಮಕ್ಕಳು ನೀರುಪಾಲು