ಭಟ್ಕಳ (Bhatkal) : ಕುಟುಂಬ ಸಮೇತ ಮುರುಡೇಶ್ವರ (Murudeshwara) ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಹಿರಿಯ ಪತ್ರಕರ್ತರೋರ್ವರು (Senior Journalist) ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಂಗ್ಲ ದೈನಿಕ ತೆಲಂಗಾಣ ಟುಡೆಯ ಹಿರಿಯ ಪತ್ರಕರ್ತ ಅನಿಲ್ ಕುಮಾರ್ ಮೃತಪಟ್ಟವರು. ಅವರಿಗೆ ೫೫ ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ ಆಶಾ ಮತ್ತು ಮಗಳು ರಶ್ಮಿಯೊಂದಿಗೆ ಗೋಕರ್ಣ(Gokarna), ಮುರುಡೇಶ್ವರ (Murudeshwara) ಸಹಿತ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ರಜೆಯ ಮೇಲೆ ಬಂದಿದ್ದರು. ರವಿವಾರ ಶ್ರೀ ಮುರುಡೇಶ್ವರ (Murdeshwar) ದೇವಸ್ಥಾನದಲ್ಲಿ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಹೃದಯಾಘಾತ ಉಂಟಾಯಿತು. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇದನ್ನೂ ಓದಿ : Mahaganapati/ ಜ. ೧೯ರಂದು ವರ್ಧಂತ್ಯುತ್ಸವ

ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಯಾಗಿರುವ ಅನಿಲ್ ಕುಮಾರ್ ಅವರು ಹೈದರಾಬಾದ್ ಮತ್ತು ವಾರಂಗಲ್‌ನಲ್ಲಿ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಆರು ವರ್ಷಗಳ ಕಾಲ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿದ್ದರು. ಅದಕ್ಕೂ ಮೊದಲು ಸ್ವತಂತ್ರ ವಾರ್ತಾ ಬ್ಯೂರೋ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ : Mankal Vaidya/ ಕೇಂದ್ರ ಸರ್ಕಾರ ಯಾರಿಗೂ ವಾಹನ ನೀಡಿಲ್ಲ

ಅವರು ೧೯೯೪ರಲ್ಲಿ ನ್ಯೂಸ್ ಟೈಮ್‌ನೊಂದಿಗೆ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಟಿಎನ್‌ಐಇ, ಚೆನ್ನೈ, ಎಪಿ ಟೈಮ್ಸ್ ಮತ್ತು ಡೈಲಿ ಹಿಂದಿ ಮಿಲಾಪ್‌ನೊಂದಿಗೆ ಹೈದರಾಬಾದ್‌ನಲ್ಲಿ ಸಹ ಕೆಲಸ ಮಾಡಿದ್ದರು. ಸಿಕಂದರಾಬಾದ್‌ನ ಸಫಿಲ್‌ಗುಡಾ ನಿವಾಸಿಯಾಗಿರುವ ಅವರು ಪತ್ನಿ ಆಶಾ, ಪುತ್ರಿ ರಶ್ಮಿ ಮತ್ತು ಪುತ್ರ ರಾಹುಲ್‌ ಅವರನ್ನು ಅಗಲಿದ್ದಾರೆ. ಅನಿಲ್ ಅವರ ಅಂತ್ಯಕ್ರಿಯೆ ಇಂದು ಮಂಗಳವಾರ ಹೈದರಾಬಾದ್‌ನ ಅಲ್ವಾಲ್ ಚಿತಾಗಾರದಲ್ಲಿ  ನಡೆಯಲಿದೆ.

ಇದನ್ನೂ ಓದಿ :  ಭಟ್ಕಳದಲ್ಲಿ “ಭೂ ಸುರಕ್ಷಾ” ಯೋಜನೆಗೆ ಚಾಲನೆ

ಮುಖ್ಯಮಂತ್ರಿ ಸಂತಾಪ : ಅನಿಲ್ ಕುಮಾರ್ ಅವರ ಹಠಾತ್ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಸೋಮವಾರದ ಸಂತಾಪ ಸಂದೇಶದಲ್ಲಿ ಮುಖ್ಯಮಂತ್ರಿಗಳು ಮೃತರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಹಿರಿಯ ಪತ್ರಕರ್ತರಾಗಿ ಅನಿಲ್ ಕುಮಾರ್ ಅವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಯನ್ನು ಸಿಎಂ ಸ್ಮರಿಸಿದ್ದಾರೆ.

ಇದನ್ನೂ ಓದಿ : ಜ.೧೪ರಿಂದ ಭಂಡೂರು ಜಾತ್ರಾ ಮಹೋತ್ಸವ