ಭಟ್ಕಳ (Bhatkal) : ಪ್ರಯಾಗರಾಜನಲ್ಲಿ (Prayagaraj) ನಡೆದ ಕುಂಭಮೇಳದಲ್ಲಿ(Kumbhamela) ಭಾಗವಹಿಸಿದ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಪತ್ನಿ ಸಮೇತ ತ್ರೀವೇಣಿ ಸಂಗಮದ (Triveni Sangam) ಪವಿತ್ರ ಗಂಗಾ ಜಲವನ್ನು (Ganga Jal) ತಂದು ಶಿವರಾತ್ರಿ (Shivaratri) ಪರ್ವಕಾಲದಲ್ಲಿ ಮುರುಡೇಶ್ವರ (Murudeshwar) ದೇವರಿಗೆ ಅಭಿಷೇಕ ಮಾಡಿಸಿ, ಪೂಜೆ ಸಲ್ಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಹಾಶಿವರಾತ್ರಿಯಂದು (Maha Shivaratri) ಪ್ರತಿವರ್ಷ ಸಚಿವ ಮಂಕಾಳ ವೈದ್ಯರು ಶಿವನಿಗೆ (Shiva) ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಮಾಡಿಸುತ್ತಿದ್ದರು. ಈ ಬಾರಿ ಅವರು ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದು ಅಲ್ಲಿನ ಪವಿತ್ರ ಗಂಗಾಜಲವನ್ನು ತಂದು ಮುರುಡೇಶ್ವರನಿಗೆ (Murudeshwar) ಅಭಿಷೇಕ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ಪುಷ್ಪಲತಾ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೇರಿದಂತೆ ಇತರ ಆಪ್ತರು ಇದ್ದರು. ಪ್ರಧಾನ ಅರ್ಚಕ ಜಯರಾಮ ಅಡಿಗಲ್ ಅಭಿಷೇಕ ಮಾಡಿಸಿ ವೈದ್ಯರ ಪರವಾಗಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : Best Physic/ ಭಟ್ಕಳದ ವಿದ್ಯಾರ್ಥಿಗಳ ಸಾಧನೆ