ಭಟ್ಕಳ: ಮೈಸೂರಿನ (Mysuru) ಯೂತ್ ಎಫರ್ಟ್ಸ್ ಫಾರ್ ಸೊಸೈಟಿ ಟ್ರಸ್ಟ್ (YES) ವತಿಯಿಂದ ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಆಯೋಜಿಸಿದ ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ ೨೦೨೫ರ ರಾಜ್ಯಶಾಸ್ತ್ರದಲ್ಲಿ ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿಯನ್ನು (best associate professor award) ಭಟ್ಕಳದ (Bhatkal) ಡಾ. ಭಾಗೀರಥಿ ನಾಯ್ಕ ಪಡೆದುಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಸ್ತುತ ಇವರು ಕುಂದಾಪುರ (Kundapura) ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ೨೦೧೯ರಲ್ಲಿ ಭಟ್ಕಳ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಸೇವೆ ಪ್ರಾರಂಭಿಸಿ ಮೂರುವರೆ ವರ್ಷ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಬಾಡಿಗೆ ಕಟ್ಟದಲ್ಲಿ ನಡೆಯುತ್ತಿದ್ದ ಕಾಲೇಜನ್ನು ನೂತನ ಕಟ್ಟಡಕ್ಕೆ ವರ್ಗಾವಣೆ ಮಾಡಲು ಇವರ ಶ್ರಮ ಕೂಡ ಇತ್ತು. ಈ ಕಾಲೇಜಿಗೆ ಎನ್.ಎ. ಎ. ಸಿ ಯಲ್ಲಿ B++ ಗೌರವನ್ನು ತಂದು ಕೊಡುವುದರ ಮೂಲಕ ೧೩ ವರ್ಷಗಳ ಭಟ್ಕಳದಲ್ಲಿ ಸೇವೆ ಸಲ್ಲಿಸಿ ೨೦೨೩ರ ಫೆ.೨ರಂದು ಕುಂದಾಪುರ ಕೋಟೇಶ್ವರ ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ. ಈಗ ಬೆಂಗಳೂರಿನಲ್ಲಿ (Bengaluru) ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿ (best associate professor award) ಪಡೆದುಕೊಂಡಿದ್ದಾರೆ.

ಇದನ್ನು ಓದಿ: devotional music/ ಚಿತ್ರಾಪುರ ಶ್ರೀಮಠದಲ್ಲಿ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ