ಭಟ್ಕಳ (Bhatkal) : ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿ (Arrest) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫಾರುಖ್ ಭೋಗಿಬಾಷಾ (28) ಬಂಧಿತ ಆರೋಪಿ. ಸದ್ಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಶಿರಾಳಕೊಪ್ಪ (Shiralakoppa) ಮೂಲದ ಈತ ಕಳೆದ ಸುಮಾರು ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಕಾರಣ ಬಂಧನ ವಾರಂಟ್ (Arrest Warrant) ಹೊರಡಿಸಿಲಾಗಿತ್ತು. ಜ. ೨೩ರಂದು ಮುರ್ಡೇಶ್ವರದ (Murdeshwar) ಓಲಗ ಮಂಟಪದ ಹತ್ತಿರ ಸಿಕ್ಕ ಆರೋಪಿತನನ್ನ ವಶಕ್ಕೆ ಪಡೆದು ಭಟ್ಕಳ ಜೆ.ಎಂ.ಎಫ್. ನ್ಯಾಯಾಲಯ ಮುಂದೆ ಹಾಜರಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : WEATHER UPDATE: ಶೀತ ಅಲೆಯ ನಡುವೆ ೭ ಜಿಲ್ಲೆಗಳಲ್ಲಿ ಭಾರೀ ಮಳೆ
ಈತನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಜಾನುವಾರು ಕಳ್ಳತನ, ಸಿದ್ದಾಪುರ ಠಾಣೆಯಲ್ಲಿ ಮಂದಿರ ಕಳ್ಳತನ, ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagar), ದೊಡ್ಡಪೇಟೆ, ಶಿರಾಳಕೊಪ್ಪ, ಸೊರಬ(Sorab), ಶಿಕಾರಿಪುರ ಮತ್ತು ಹಾವೇರಿ (Haveri) ಜಿಲ್ಲೆಯ ಹಿರೇಕೆರೂರು(Hirekerur) ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ. ಈತ ಸುಮಾರು ೧೫ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಹೆಚ್ಚಿನ ಪ್ರಕರಣಗಳು ಜಾನುವಾರು ಕಳ್ಳತನದ್ದೆಂದು ತಿಳಿದು ಬಂದಿದೆ. ಅಲ್ಲದೇ ಈತ ತೀರ್ಥಹಳ್ಳಿ (Thirthahalli) ಪೊಲೀಸ್ ಠಾಣೆಯ ಧೀರ್ಘಕಾಲದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿತನಾಗಿದ್ದಾನೆ.
ಇದನ್ನೂ ಓದಿ : Nandini Milk/ ಫೆ. ೧ರಿಂದ ನಿಮ್ಮ ಮನೆಗೆ ನಂದಿನಿ ಹಾಲು ಬರೋದಿಲ್ಲ !
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ.ಎಂ., ಭಟ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಹೇಶ.ಎಂ.ಕೆ. ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಪಿ.ಎಸ್.ಐ. ನವೀನ್ ಎಸ್. ನಾಯ್ಕ ನೇತೃತ್ವದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಎಚ್.ಸಿ. ಜೈರಾಮ ಹೊಸ್ಕಟ್ಟಾ, ಉದಯ ನಾಯ್ಕ, ಮುರ್ಡೇಶ್ವರ ಠಾಣೆಯ ಸುರೇಶ ದೇವಾಡಿಗ ಮತ್ತು ಪಿಸಿ ಕಾಶಿನಾಥ ಕೊಟಗುಣಶಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : Pallakki/ ಫೆ.೩ರಂದು ಶ್ರೀಧರ ಪದ್ಮಾವತಿ ದೇವಿ ಪಲ್ಲಕ್ಕಿ ಉತ್ಸವ