ಭಟ್ಕಳ: ರಾಷ್ಟ್ರೀಯ ಹೆದ್ದಾರಿ-೬೬ರ ಬಸ್ತಿಮಕ್ಕಿ ಕ್ರಾಸ್ ಸಮೀಪ ಶನಿವಾರ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ (Bike Accident).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ (Honnavar) ತಾಲೂಕಿನ ಅರೊಳ್ಳಿ ಗ್ರಾಮದ ವಿನಾಯಕ ಗೋವಿಂದ ಮೇಸ್ತ (39) ತಮ್ಮ ಆಟೋ ರಿಕ್ಷಾವನ್ನು ಮುರುಡೇಶ್ವರ ಕಡೆಯಿಂದ ಹೊನ್ನಾವರದತ್ತ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು, ಬಸ್‌ವೊಂದನ್ನು ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ (Bike Accident).
ಇದನ್ನು ಓದಿ: Bike theft/ ಬೈಕ್ ಕದ್ದು ಬೆಂಕಿ ಹಚ್ಚಿದ ದುರುಳರು
ಡಿಕ್ಕಿಯಿಂದ ಬೈಕ್ ಸವಾರ ರಸ್ತೆಗೆ ಬಿದ್ದು ಎಡ ಭುಜಕ್ಕೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಾಯಾಳು ದೊಡ್ಡಬಲಸೆ ಬೈಲೂರು ಗ್ರಾಮದ ಹೇಮಂತ ಈಶ್ವರ ನಾಯ್ಕ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ (Murudeshwara police station) ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ (case filed) ತನಿಖೆ ಮುಂದುವರೆಸಿದ್ದಾರೆ.
ಇದನ್ನು ಓದಿ: Asset seized/ ಭಟ್ಕಳದಲ್ಲಿ ೮ ಜನರ ಬಂಧನ; ೪.೦೫ ಲಕ್ಷ ರೂ ಸ್ವತ್ತು ವಶಕ್ಕೆ



