ಭಟ್ಕಳ: ಫೋರ್ಡ್ ಕಾರಿಗೆ ಹಿಂಬದಿಯಿಂದ ಸ್ಕೋಡಾ ಕಾರು ಡಿಕ್ಕಿ ಹೊಡೆದ ಪರಿಣಾಮ ಫೋರ್ಡ್ ಕಾರು ಒಂದು ಸುತ್ತು ತಿರುಗಿ ಬ್ಯಾರಿಕೇಡಿಗೆ ಡಿಕ್ಕಿಯಾಗಿ ಜಖಂಗೊಂಡ ಘಟನೆ (accident) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫೋರ್ಡ್ ಕಾರು ಚಾಲಕ ಮಂಗಳೂರಿನ (Mangaluru) ಸಾಫ್ಟ್ವೇರ್ ಇಂಜಿನಿಯರ್ ವಿಕಾಸ ಸುರೇಶ ಅತ್ತಾವರ್ (೩೭) ಎಂಬವರು ಬೆಂಗಳೂರಿನ (Bengaluru) ಬೇಗೂರು ನಿವಾಸಿ ಜಾಕ್ಸನ್ ತಂದೆ ಜಾನ್ ಮೆಂಡೊನ್ಜಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನು ಓದಿ: unidentified man/ ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು
ದಿನಾಂಕ ೦೪/೦೧/೨೦೨೬ರಂದು ಸಂಜೆ ೬-೧೫ ಗಂಟೆಗೆ ಸ್ಕೊಡಾ ವಾಹನ ಚಾಲಕನು ತಾನು ಚಲಾಯಿಸಿಕೊಂಡ ಬಂದ ಕಾರನ್ನು ಭಟ್ಕಳ (Bhatkal) ಕಡೆಯಿಂದ ಕುಂದಾಪುರ (Kundapura) ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು ಭಟ್ಕಳ-ಕುಂದಾಪುರ ಎನ್.ಎಚ್-೬೬ ರಸ್ತೆಯ ಮೇಲೆ ತೂರ್‌ಮಸೀದಿ ಹತ್ತಿರ ಮುಂದೆ ಚಲಾಯಿಸಿಕೊಂಡು ಹೋಗುತ್ತಿದ್ದ ಫೋರ್ಡ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾನೆ (accident). ಈ ಅಪಘಾತದಿಂದ ಫೋರ್ಡ್ ಕಾರು ೧ ಸುತ್ತು ತಿರುಗಿ ಮುಂದಿನ ಬ್ಯಾರಿಕೆಡಗೆ ಡಿಕ್ಕಿ ಹೊಡೆದು ಮುಂದಿನ ಭಾಗ ಜಖಂಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: unidentified man/ ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು



