ಭಟ್ಕಳ: ತಾಲೂಕಿನ ವೆಂಕ್ಟಾಪುರ ಬ್ರಿಡ್ಜ್ ಸಮೀಪ ಚಲಿಸುತ್ತಿದ್ದ ಸುಜುಕಿ ಮೋಟರ್ ಸೈಕಲ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.
ವಿಡಿಯೋ ನೋಡಿ : https://fb.watch/qj1oGumzS2/?mibextid=Nif5oz
ಮೃತ ಮೋಟಾರ್ ಸೈಕಲ್ ಸವಾರ ಉತ್ತರಕೊಪ್ಪ ಗೋಳಿಕುಂಬ್ರಿ ನಿವಾಸಿ ಪಿ.ಟಿ. ಚಾಕುಚ್ಚನ್ ಎಂದು ತಿಳಿದು ಬಂದಿದೆ. ಚಾಲಕ ಶಿವನಗೌಡ ಸುರೇಶಗೌಡ ಪಾಟೀಲ್ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ-66 ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿಕೊಂಡು ವೆಂಕಟಾಪುರ ಸೇತುವೆ ಸಮೀಪ ಬಂದ ವೇಳೆ ಅದೇ ರಸ್ತೆಯಲ್ಲಿ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು.
ತಕ್ಷಣ ಸಾಮಾಜಿಕ ಕಾರ್ಯಕರ್ತ ನಾಗೇಶ ನಾಯ್ಕ ಮತ್ತಿತರರು ಗಾಯಾಳುವನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಮೋಟಾರ್ ಸೈಕಲ್ ಸವಾರನ ಬಲಗೈಗೆ ಗಂಭೀರ ಪ್ರಮಾಣದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಇದನ್ನೂ ಓದಿ : ಆಟೋಗೆ ಡಿಕ್ಕಿ ಹೊಡೆದ ಟಾಟಾ ಏಸ್: ನಾಲ್ವರಿಗೆ ಗಾಯ, ಇಬ್ಬರು ಗಂಭೀರ
ಈ ಕುರಿತು ಮೃತನ ಪತ್ನಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.