ಭಟ್ಕಳ: ಶಿಕ್ಷಕರಾದವರು, ತಾವು ಪಾಠ ಮಾಡುವ ವಿಷಯದಲ್ಲಿ ಪ್ರಭುದ್ಧತೆಯನ್ನು ಹೊಂದಿದರೆ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೊನ್ನಾವರದ (Honnavar) ಎಂಪಿಇ ಸೊಸೈಟಿ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ಡಾ ವಿಜಯಲಕ್ಷ್ಮಿ ನಾಯ್ಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳದ (Bhatkal) ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ ಎಡ್ ವಿದ್ಯಾರ್ಥಿಗಳ ವಾರ್ಷಿಕ ಬಹುಮಾನ ವಿತರಣೆ (Annual prize distribution) ಮತ್ತು ದೀಪದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದನ್ನು ಓದಿ: BED College/ ಜ್ಞಾನೇಶ್ವರಿ ಕಾಲೇಜಿನಲ್ಲಿ ದೀಪದಾನ ಕಾರ್ಯಕ್ರಮ
ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಸುಮಿತ್ರಾ ಕೌಶಿಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ ವಿರೇಂದ್ರ ವಿ. ಶಾನಭಾಗ ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ ಮಡಿವಾಳ ವರದಿ ವಾಚಿಸಿದರು. ಉತ್ತಮ ಭಾವಿ ಶಿಕ್ಷಕಿ ಪ್ರಶಸ್ತಿಯನ್ನು ಲಕ್ಷ್ಮಿ ಪಡೆದುಕೊಂಡರು. ವಿಶ್ರಾಂತ ಪ್ರಾಂಶುಪಾಲ ಡಾ ಅಜಾತಸ್ವಾಮಿ ಅವರ ತಂದೆಯವರಾದ ಎಚ್ ಎಂ ಜಿ ಮೂರ್ತಿ ಅವರ ಸ್ಮರಣಾರ್ಥ ನೀಡುವ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಪ್ರವೀಣ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಾಗರಾಜ ಮಡಿವಾಳ ಪಡೆದುಕೊಂಡರು (Annual prize distribution).
ಇದನ್ನು ಓದಿ: black belt / ಬ್ಲ್ಯಾಕ್ ಬೆಲ್ಟ್ ಪ್ರದಾನ
ಪ್ರಿಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಿಯಾಂಕ ದೇವಾಡಿಗ ಸ್ವಾಗತಿಸಿದರು. ಸಿಂಧೂ ಖಾರ್ವಿ ವಂದಿಸಿದರು. ಸಂಕಲ್ಪ, ಪ್ರತಿಕ್ಷಾ, ನಾಗರತ್ನ, ಭಾರ್ಗವಿ, ಸಿಂಧೂ ಆಚಾರ್ಯ ಮತ್ತು ಅನಿಲ ನಿರೂಪಿಸಿದರು.
ಇದನ್ನು ಓದಿ: education/ ಮೌಲ್ಯಯುತ ಶಿಕ್ಷಣ ಮಾಯ; ವಿಷಾದ



