ಭಟ್ಕಳ (Bhatkal) : ಹಿಂಸಾತ್ಮಕವಾಗಿ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-೬೬ರ ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ (quick operation) ನಡೆಸಿ ಸೋಮವಾರ ಮುಂಜಾನೆ ವಾಹನ ವಶಕ್ಕೆ ಪಡೆದು ಮೈಸೂರು (Mysuru) ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಂಧಿತ ಆರೋಪಿಗಳನ್ನು ಕೆ.ಆರ್.ನಗರದ (KR Nagar) ರಾಘವೇಂದ್ರ ನಾಗೇಂದ್ರ (30 ) ಹಾಗೂ ಪಿರಿಯಾಪಟ್ಟಣದ (Piriyapattana) ಅಯೂಬ್ ಅಹ್ಮದ ರಶೀದ ಅಹ್ಮದ (40) ಎಂದು ಗುರುತಿಸಲಾಗಿದೆ. ಇವರು ವಧೆ ಮಾಡುವ ಉದ್ದೇಶದಿಂದ ೫.೫೦ ಲಕ್ಷ ರೂ. ಮೌಲ್ಯದ ೧೧ ಕೋಣಗಳು ಹಾಗೂ ೨.೫೦ ಲಕ್ಷ ರೂ. ಮೌಲ್ಯದ ೫ ಎಮ್ಮೆಗಳನ್ನು ಯಾವುದೇ ಪಾಸ್ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದರು. ಅಶೋಕ ಲೇಲ್ಯಾಂಡ (Ashok Leyland) ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಗ್ಗಗಳಿಂದ ಕಟ್ಟಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ೧೧ ಕೋಣಗಳು ಮತ್ತು ೫ ಎಮ್ಮೆಗಳನ್ನು ಹಾಗೂ ಅಶೋಕ ಲೇಲ್ಯಾಂಡ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಕೆರೆಗೆ ಹಾರಿ ಸೊರಬದ ಯುವತಿ ಆತ್ಮಹತ್ಯೆ
ಭಟ್ಕಳ ಶಹರ ಠಾಣೆ ಪಿ.ಐ. ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ ಕಾರ್ಯಾಚರಣೆ (quick operation) ನಡೆದಿತ್ತು., ಪಿ.ಎಸ್.ಐ. ಸೋಮರಾಜ ರಾಠೋಡ, ಸಿಬ್ಬಂದಿ ಉದಯ ನಾಯ್ಕ, ಮಹಾಂತೇಶ ಪಮ್ಮಾರ, ಶಿವಶರಣಪ್ಪ ಶಿನ್ನೂರ, ರಾಜು ಗೊಟಗೋಡಿ, ಪರಮಾನಂದ ಉಜ್ಜಿನಕೊಪ್ಪ, ಅಪರಾದ ವಿಭಾಗದ ಸಿಬ್ಬಂದಿ ಮಹಾಂತೇಶ ಹಿರೇಮಠ ಮತ್ತು ಕೃಷ್ಣಾ ಎನ್.ಜಿ ಇದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್ ಆಟಗಾರ