ಭಟ್ಕಳ (Bhatkal): ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಾಹನ ಮಾಲಕ ಚಾಲಕ ಸಂಘವು ಮಿನಿ ಬಸ್ ಮತ್ತು ಟೆಂಪೊ ಟ್ರಾವೆಲ್ಲರ ವತಿಯಿಂದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಲೋಕೋಪಯೋಗಿ ಅಧಿಕಾರಿ ಅವರಲ್ಲಿ ಮನವಿ ಪತ್ರದ (memorandum) ಮೂಲಕ ಆಗ್ರಹಿಸಿದೆ(Appeal).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಸಾಗರ (Sagar) ರಸ್ತೆಯಲ್ಲಿರುವ ರಸ್ತೆಯ ಎಡಭಾಗ ಹಾಗೂ ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದ ನಮಗೆ ಮಿನಿ ಬಸ್ ಮತ್ತು ಟೆಂಪೊ ಪಾರ್ಕಿಂಗ್ ಮಾಡಲು ಅನಾನೂಕೂಲತೆ ಉಂಟಾಗಿದೆ. ರಸ್ತೆಯ ಪಕ್ಕದಲ್ಲಿರುವಂತಹ ಕಲ್ಲುಗಳನ್ನು ತೆರವುಗೊಳಿಸಿ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ನಮಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡುವಂತೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ (Appeal).

ಇದನ್ನೂ ಓದಿ : workshop/ ಕಾರ್ಯಕ್ರಮ ಸಂಘಟನಾ ಕಾರ್ಯಗಾರ

ಈ ಬಗ್ಗೆ ಮಾತನಾಡಿದ ಬಸ್ ಮತ್ತು ಟೆಂಪೊ ಟ್ರಾವೆಲ್ಲರ ಉಪಾಧ್ಯಕ್ಷ ಚಂದ್ರು ನಾಯ್ಕ, ಕಳೆದ ೨೫ ವರ್ಷಗಳಿಂದ ಸಾಗರ ರಸ್ತೆಯ ಪಕ್ಕ ಟೆಂಪೋ ನಿಲ್ಲಿಸುತ್ತಿದ್ದೇವೆ. ಇತ್ತೀಚೆಗೆ ರಸ್ತೆ ಅಗಲೀಕರಣ ಮಾಡುತ್ತಿರುವುದರಿಂದ ಟೆಂಪೋ ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ನಾವು ಒಂದು ವರ್ಷಕ್ಕೆ ೭೫ ಸಾವಿರ ರೂ. ತೆರಿಗೆ ತುಂಬುತ್ತಿದ್ದೇವೆ. ಆದರೂ ನಮಗೆ ಸರಿಯಾದ ನಿಲ್ದಾಣದ ವ್ಯವಸ್ಥೆ ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿವರಾಜ ನಾಯ್ಕ, ಹೊನ್ನಯ್ಯ ದೇವಾಡಿಗ, ನಾಗೇಶ ನಾಯ್ಕ, ಯಶೋಧರ ನಾಯ್ಕ, ಹರೀಶ ಶೇಟ, ಮಧುಸೂಧನ ಶೇರುಗಾರ, ಭಾಸ್ಕರ ನಾಯ್ಕ ಮಣ್ಕುಳಿ, ಗಣೇಶ ನಾಯ್ಕ ಹಾಗೂ ಇತರ ಚಾಲಕರು ಉಪಸ್ಥಿತರಿದ್ದರು.

ಇದನ್ನೂ ಓದಿ : Arrested/ ಗರ್ಭಿಣಿ ಹಸು ಕೊಂದ ಭಟ್ಕಳದ ಇಬ್ಬರ ಬಂಧನ