ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿಯನ್ನು ಭಟ್ಕಳ ನಗರಸಭೆಗೆ (Bhatkal City Municipal Council) ಸೇರಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರ (cabinet decision) ವಿರೋಧಿಸಿ ಹೆಬಳೆ ಗ್ರಾಮಸ್ಥರು ಹಾಗೂ ಪಂಚಾಯತಿ ಸದಸ್ಯರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಕಳಿಸಿದ್ದಾರೆ (Appeal to the Governor).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರ್ನಾಟಕ ಸರ್ಕಾರದ (Karnataka Government) ಸಚಿವ ಸಂಪುಟದ ಸಭೆಯಲ್ಲಿ ಭಟ್ಕಳ ಪುರಸಭೆಯನ್ನು (Bhatkal Town Municipal Council) ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯಲ್ಲಿ ನಮ್ಮ ಹೆಬಳೆ ಗ್ರಾಮ ಪಂಚಾಯತನ್ನು ಸೇರಿಸುವುದು ಹೆಬಳ ಗ್ರಾಮ ಪಂಚಾಯತ ಸದಸ್ಯರ ಹಾಗೂ ಗ್ರಾಮಸ್ಥರಿಂದ ತೀವ್ರ ವಿರೋಧಿಸಲಾಗಿದೆ. ಹೆಬಳೆ ಗ್ರಾಮ ಪಂಚಾಯತ ಈಗಲೂ ಶೇ ೫೦ಕ್ಕಿಂತ ಹೆಚ್ಚು ಕೃಷಿ ಜಮೀನನ್ನು ಹೊಂದಿದ್ದು, ಶೇ ೯೦ ಗ್ರಾಮಸ್ಥರು ಕೃಷಿ ಕೂಲಿ ಮತ್ತು ಮೀನುಗಾರಿಕಾ ಕಾರ್ಮಿಕರಾಗಿರುತ್ತಾರೆ. ಭಟ್ಕಳದಿಂದ ಸುಮಾರ ೯ ಕಿ ಮೀ ದೂರದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳ ಗ್ರಾಮೀಣ ಕೃಪಾಂಕವೂ ಇದರಿಂದ ರದ್ದಾಗಿ ಅವರ ಶಿಕ್ಷಣದ ಮೇಲೆ ಪ್ರಭಾವ ಬೀರಲಿದೆ. ಬಡಕಾರ್ಮಿಕರ ಮನೆ ಟ್ಯಾಕ್ಸ್ ವಿದ್ಯುತ್, ನೀರು ಮತ್ತು ಇನ್ನಿತರ ಕರಗಳು ದುಪ್ಪಟ್ಟಾಗಿ ದುಸ್ತರವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Farmer Dies/ ಬಾವಿಗೆ ಬಿದ್ದು ಕೃಷಿಕ ಸಾವು
ಭಟ್ಕಳ ಪುರಸಭೆಗೆ ಕೂಗಳತೆಯ ದೂರದಲ್ಲಿರುವ ಗ್ರಾಮ ಪಂಚಾಯತನ್ನು ಬಿಟ್ಟು, ನಮ್ಮ ಹೆಬಳೆ ಪಂಚಾಯತನ್ನು ಸೇರಿಸುವುದಕ್ಕೆ ಕಳೆದ ವರ್ಷದಲ್ಲಿ ನಡೆದ ಸಾಮಾನ್ಯ ಸಭೆಯ ತೀರ್ಮಾನ ಮಾಡಿತ್ತು. ಇದರ ವಿರುದ್ಧವಾಗಿ ಹಾಗೂ ಸ್ಥಳೀಯ ಜನಾಭಿಪ್ರಾಯದ ವಿರುದ್ಧವಾಗಿ ನಮ್ಮ ಹೆಬಳೆ ಗ್ರಾಮ ಪಂಚಾಯತನ್ನು ನಗರಸಭೆಗೆ ಸೇರಿಸಿರುವ ಪ್ರಸ್ತಾವನೆಗೆ ನಮ್ಮ ಹೆಬಳೆ ಗ್ರಾಮ ಪಂಚಾಯತನ ಸಾರ್ವಜನಿಕರ ವಿರೋಧವಿದೆ. ಆದ್ದರಿಂದ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ತೆಗೆದುಕೊಂಡ ಈ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸೂಚಿಸಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ (Appeal to the Governor).
ಇದನ್ನೂ ಓದಿ: Kick Boxing/ ಬೆಂಗಳೂರಲ್ಲಿ ಭಟ್ಕಳದ ಮಕ್ಕಳ ಪದಕಗಳ ಬೇಟೆ, ರಾಷ್ಟ್ರಮಟಕ್ಕೆ ಆಯ್ಕೆ
ಈ ವೇಳೆ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ , ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ, ಮಾಜಿ ಮಂಡಲ ಅಧ್ಯಕ್ಷ ಹಾಗೂ ಹೆಬಳೆ ಪಂಚಾಯತ ಸದಸ್ಯ ಸುಬ್ರಾಯ ದೇವಾಡಿಗ ಮಾತನಾಡಿದರು. ಮುಖಂಡ ರಾಮ ನಾಯ್ಕ, ಹೆಬಳೆ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: Bhatkal Municipal Council/ ಭಟ್ಕಳ ನಗರಸಭೆ ಸೇರಲು ಹೆಬಳೆ ಗ್ರಾ ಪಂ ವಿರೋಧ



