ಭಟ್ಕಳ (Bhatkal): ತಾಲೂಕಿನ ವೆಂಕಟಾಪುರದ ಐಸ್ ಫ್ಯಾಕ್ಟರಿ ಮೀನಾ ರಸ್ತೆಯಲ್ಲಿ, ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಶಂಕಿತ ಚಲನವಲನ ಕಂಡು ತಕ್ಷಣ ದೌಡಾಯಿಸಿ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ (Arrest).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆರೋಪಿಯನ್ನು ಉಡುಪಿಯ ಆಕೀಫ್ ಮೊಹ್ಮದ್ ಅಬ್ದುಲ್ ಅಜೀಮ್ ಬುಡಾನ್ ಬಾಷಾ (೧೯) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಬೈಂದೂರು ಹಾಗೂ ಗಂಗೊಳ್ಳಿ (Gangolli) ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಿವೆ. ಬೈಂದೂರಿನಲ್ಲಿ (Byndoor) ನಡೆದಿದ್ದ ಕಾರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿ (arrest) ೨ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಎಂದು ತಿಳಿದು ಬಂದಿದೆ.
ಇದನ್ನು ಓದಿ: Police raid/ ಕೋಳಿ ಅಂಕ ಆಡುತ್ತಿದ್ದ ಅರಣ್ಯ ಪ್ರದೇಶದಲ್ಲಿ ಪೊಲೀಸ್ ದಾಳಿ
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಪಿಐ ಮಂಜುನಾಥ ಮತ್ತು ಎಸ್ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಪೊಲೀಸರು ಕೈಗೆತ್ತಿಕೊಂಡಿದ್ದು, ಈತನ ಹಿಂದೆ ಇತರ ಯಾವ ಪ್ರಕರಣಗಳ ಸಂಪರ್ಕವಿದೆ ಎಂಬುದರ ಮೇಲೆ ಗಂಭೀರ ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint filed).
ಇದನ್ನು ಓದಿ: felicitation ceremony/ ಕನ್ನಡ ನಾಡು-ನುಡಿಯ ಅಭಿಮಾನ ಸದಾ ಜೀವಂತ ವಾಗಿರಬೇಕು : ಡಿ ಬಿ ನಾಯ್ಕ



