ಭಟ್ಕಳ: ತೆಂಗಿನ ಮರಕ್ಕೆ ಸಂಬಂಧಿಸಿದಂತೆ ನೆರೆಮನೆಯವರ ನಡುವೆ ಗಲಾಟೆ ನಡೆದು ಮಹಿಳೆ ಮೇಲೆ ಹಲ್ಲೆ (Assault) ನಡೆಸಿರುವ ಘಟನೆ ಭಟ್ಕಳ ತಾಲೂಕಿನ ಜಾಲಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಾಲಿಯ ಟಗ್ಗರಗೋಡ ನಿವಾಸಿ ಅಬ್ದುಲ್ ಸಮೀರ ಮುಲ್ಲಾ ತಂದೆ ಅಬ್ದುಲ್ ಖಾದೀರ ಮುಲ್ಲಾ (೩೬) ನೆರೆಮನೆಯವರಾದ ಮೋಹಿದ್ದಿನ ಸಾಬ ಹೊಸ್ಮನಿ (೬೦) ಮತ್ತು ಗಫರ ಮೋಹಿದ್ದಿನ ಸಾಬ ಹೊಸ್ಮನಿ (೩೮) ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: bikers injured/ ಡಿಗ್ಗರ್ ಟ್ರಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯ 

ಆಪಾದಿತರ ಹಿತ್ತಲಿನಲ್ಲಿದ್ದ ತೆಂಗಿನ ಮರಗಳು ಪಿರ‍್ಯಾದಿಯ ಮನೆಯ ಮುಂದಿನ ರಸ್ತೆಯ ಮೇಲೆ ವಾಲಿಕೊಂಡು ಬಂದಿದ್ದು ಮರಗಳಲ್ಲಿನ ಒಣಗಿದ ಕಾಯಿಗಳು ಮತ್ತು ಗರಿಗಳು ಮೈ ಮೇಲೆ ಬಿಳುತ್ತದೆ ಮತ್ತು ಆಪಾದಿತರ ಮನೆಯ ಗಟಾರದ ನೀರು ಪಿರ್ಯಾದಿಯ ಮನೆಯ ಹಿತ್ತಲಿಗೆ ಬರುತ್ತಿದ್ದು, ಇದನ್ನು ಸರಿಮಾಡಿ ಅಂತಾ ಆಪಾದಿತರಿಗೆ ಹೇಳಿದರೂ ಸಹ ಮಾಡದೇ ಹಾಗೇ ಬಿಟ್ಟಿದ್ದರು. ಜನವರಿ ೫ರಂದು ತೆಂಗಿನ ಮರದ ಗರಿ ಪಿರ್ಯಾದಿಯ ತಾಯಿಯ ಮೇಲೆ ಬಿದ್ದ ವಿಚಾರವಾಗಿ ಪಿರ್ಯಾದಿಯು ಮಧ್ಯಾಹ್ನ ೧೨-೪೫ ಗಂಟೆ ಸುಮಾರಿಗೆ ಅಬ್ದುಲ್ ಸಮೀರ್ ಹತ್ತಿರ ಇದನ್ನು ಯಾವಾಗ ತೆಗೆಯುತ್ತೀರಿ ಅಂತಾ ಕೇಳಿದ್ದಕ್ಕೆ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದಾಗ ರಕ್ಷಿಸಿದ್ದ ಯುವಕ ಆತ್ಮಹತ್ಯೆ

ಪಿರ್ಯಾದಿಯ ತಾಯಿ ಮತ್ತು ಚಿಕ್ಕಮ್ಮಾ ಬಿಬಿ ಫಾತೀಮಾ ಕೋಂ ಅಬ್ದುಲ ರಜಾಕ ಇವರು ಮನೆಯ ಹೊರಗಡೆ ರಸ್ತೆಯ ಮೇಲೆ ಬಂದು ಮಾತನಾಡುತ್ತಿದ್ದಾಗ ಅದೇ ವೇಳೆ ಅಲ್ಲಿಗೆ ಬಂದ ಗಫರ್ ಚಿಕ್ಕಮ್ಮಳಿಗೆ ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಲ್ಲೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡ ಸಮೀರ್ ಪಿರ್ಯಾದಿಯ ಚಿಕ್ಕಮ್ಮನಿಗೆ ಹೊಡೆದಿದ್ದರಿಂದ ಹಣೆಗೆ ಗಾಯವಾಗಿ ರಕ್ತ ಸೋರಿದೆ.

ಇದನ್ನು ಓದಿ: poetry competition/ ಅಂತಾರಾಷ್ಟ್ರೀಯ ಮಟ್ಟದ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ 

ಪಿರ್ಯಾದಿಯ ಚಿಕ್ಕಮ್ಮನಿಗೆ ಕೈಯಿಂದ ಹೊಡೆಯಲು ಹೋಗಿ ದೂಡಿ ಹಾಕಿ (assault) ಅಲ್ಲಿಂದ ಹೋಗುವಾಗ ತೆಂಗಿನ ಮರಗಳ ವಿಷಯಕ್ಕೆ ಬಂದರೆ ನಿಮ್ಮನ್ನು ಬಿಡುವುದಿಲ್ಲಾ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Accident/ ಫೋರ್ಡ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸ್ಕೋಡಾ ಕಾರು