ಭಟ್ಕಳ (Bhatkal) : ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಸಿಟ್ಟಿನಿಂದ ಸಹಾಯ ಮಾಡಿದವನ ಮೇಲೇ ಹಲ್ಲೆ ನಡೆಸಿ (assaulted), ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರದ (Murudeshwar) ಮಾವಳ್ಳಿ-೨ರ ನಿವಾಸಿ ಗಣೇಶ ಜಯಂತ ನಾಯ್ಕ (೨೩) ಹಲ್ಲೆಗೊಳಗಾದವರು. ಮುರುಡೇಶ್ವರದ ಕೇರಿ ರಸ್ತೆ ನಿವಾಸಿ ನಾಗೇಂದ್ರ ಅಲಿಯಾಸ್ ಬಾಬು ಶ್ರೀಧರ ನಾಯ್ಕ (೩೭) ಹಲ್ಲೆ ನಡೆಸಿ ಆರೋಪಿಯಾಗಿದ್ದಾರೆ. ಇವರಿಬ್ಬರೂ ಸಂಬಂಧಿಗಳು. ಮುರುಡೇಶ್ವರದಲ್ಲಿ ರೂಮ್ ಬಾಯ್ ಕೆಲಸ ಮಾಡಿಕೊಂಡಿರುವ ಗಣೇಶ ನಾಯ್ಕ, ಸಂಬಂಧಿಯಾಗಿರುವ ಹೋಟೆಲ್ ವೃತ್ತಿ ಮಾಡಿಕೊಂಡಿರುವ ನಾಗೇಂದ್ರ ನಾಯ್ಕಗೆ ತಿಂಗಳ ಹಿಂದೆ ವೈಯಕ್ತಿಕ ಕೆಲಸಕ್ಕೆ ೩೦ ಸಾ.ರೂ. ನೀಡಿದ್ದರು. ಅದನ್ನು ಮರಳಿ ಕೇಳಿದ್ದರಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.
ಇದನ್ನೂ ಓದಿ : Pahalgam attack/ ಉತ್ತರ ಕನ್ನಡ ಜಿಲ್ಲೆಯ ೩೨ ಪ್ರವಾಸಿಗರು ಸುರಕ್ಷಿತ
ಮುರುಡೇಶ್ವರದ ನಿಸರ್ಗ ಹೋಟೆಲ್ ಗಾರ್ಡನ್ನಲ್ಲಿ ನಾಗೇಂದ್ರ ನಾಯ್ಕ ಇದ್ದಾಗ ಹಣ ಕೊಡುವಂತೆ ಗಣೇಶ ನಾಯ್ಕ ಕೇಳಿದ್ದರು. ಒಮ್ಮೇಲೆ ಸಿಟ್ಟು ಮಾಡಿಕೊಂಡ ನಾಗೇಂದ್ರ ನಾಯ್ಕ ಹಣ ಕೊಡುವುದಿಲ್ಲ ಏನು ಮಾಡಿಕೋತಿಯಾ ಮಾಡು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲೇ ಇದ್ದ ಬಿಯರ್ ಬಾಟಲಿಯನ್ನು ಒಡೆದು, ಅದರ ಗ್ಲಾಸ್ನಿಂದ ಹಲ್ಲೆ ನಡೆಸಿದ್ದಾರೆ (assaulted). ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೊಳಗಾದ ಗಣೇಶ ನಾಯ್ಕ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : cricket tournament/ ಮೀಡಿಯಾ ಕಪ್ ಆಮಂತ್ರಣ ಪತ್ರಿಕೆ ಬಿಡುಗಡೆ