ಭಟ್ಕಳ (Bhatkal): ಆಟೋ ರಿಕ್ಷಾ ಡಿಕ್ಕಿಯಾಗಿ (Auto Rikshaw hit) ಸೈಕಲ್‌ (cycle) ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಗಾಯಗೊಂಡ ಘಟನೆ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುಂಡಳ್ಳಿಯ ಡಿ.ಪಿ.ರಸ್ತೆ ನಿವಾಸಿ ನಾರಾಯಣ ದೇವಯ್ಯ ನಾಯ್ಕ (೬೫) ಗಾಯಗೊಂಡವರು. ಇವರು ಮುಂಡಳ್ಳಿ ಚರ್ಚ್‌ ಕಡೆಯಿಂದ ತಮ್ಮ ಮನೆಯ ಕಡೆಗೆ ಸೈಕಲ್‌ ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚರ್ಚ್‌ ರಸ್ತೆ ಸರ್ಕಲ್‌ ಹತ್ತಿರ ಭಟ್ಕಳ ಕಡೆಯಿಂದ ಅತಿವೇಗವಾಗಿ ಬಂದ ಆಟೋ ರಿಕ್ಷಾ ಸೈಕಲ್‌ಗೆ ಡಿಕ್ಕಿಯಾಗಿದೆ (Auto Rikshaw hit) . ಪರಿಣಾಮ ಸೈಕಲ್‌ ಹಿಡಿದುಕೊಂಡು ಹೋಗುತ್ತಿದ್ದ ನಾರಾಯಣ ನಾಯ್ಕ ಬಿದ್ದು, ಅವರ ಬಲ ಕಾಲಿನ ಮೇಲೆ ಆಟೋ ರಿಕ್ಷಾ ಹಾದುಹೋಗಿದೆ ಎಂದು ದೂರಿನಲ್ಲಿ (complaint) ತಿಳಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು (case registered) ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಸಚಿವರ ನೃತ್ಯಕ್ಕೆ ಭಾರೀ ಟೀಕೆ