ಭಟ್ಕಳ (Bhatkal) : ಇಲ್ಲಿನ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವದ ಅಂಗವಾಗಿ ಹಮ್ಮಿಕೊಂಡ ಭಜನಾ ಕಣಿತ (Bhajan Dance) ಸ್ಪಧೆಯಲ್ಲಿ ಭಟ್ಕಳ ತಾಲೂಕಿನ ಸರ್ಪನಕಟ್ಟೆ ಹಾರ್ಸಿಕಾನದ ಯಕ್ಷದೇವತೆ ಭಜನಾ ತಂಡ ಪ್ರಥಮ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನವನ್ನು ಅಳ್ವೆಕೋಡಿ ಸಣಭಾವಿಯ ಶ್ರೀ ರಾಮಾಂಜನೇಯ ಮಹಿಳಾ ಭಜನಾ ತಂಡ ಮತ್ತು ಆಸರಕೇರಿಯ ಶ್ರೀ ವೆಂಕಟೇಶ್ವರ ಭಜನಾ ತಂಡ ತೃತೀಯ ಸ್ಥಾನ ಪಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕಾರ್ತಿಕ ಮಾಸದ ಭಜನಾ ಸಪ್ತಾಹದ ಅಂಗವಾಗಿ ಆಸರಕೇರಿಯ ಶ್ರೀ ವೆಂಕಟೇಶ್ವರ ಯುವಕ ಸಂಘ ಹಾಗೂ ಶ್ರೀ ವೆಂಕಟೇಶ್ವರ ಭಜನಾ ತಂಡ ಹಮ್ಮಿಕೊಂಡ ಈ ಭಜನಾ ಕುಣಿತ (Bhajan Dance) ಸ್ಪರ್ಧೆ ಆಯೋಜಿಸಿತ್ತು. ಶ್ರೀ ವೆಂಕಟೇಶ್ವರ ಬಾಲಕರ ಭಜನಾ ಕುಣಿತ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಶ್ರೀ ದೇವರ ಮಹಾಪೂಜೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಧರ ನಾಯ್ಕ ಮಾತನಾಡಿ, ಪ್ರತಿಯೊಂದು ಮನೆಯಲ್ಲಿಯೂ ಸಹ ಭಜನೆಯಲ್ಲಿ ತಮ್ಮ ಮಕ್ಕಳು ಪಾಲ್ಗೊಳ್ಳುವಂತೆ ಮಾಡಿ ಅದನ್ನು ಮುಂದಿನ ಪೀಳಿಗೆಯವರಿಗೆ ಪರಿಚಯಿಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ. ಈ ಮೂಲಕ ನಮ್ಮ ಧರ್ಮ ಸಂಸ್ಕçತಿಯನ್ನು ಉಳಿಸಬೇಕಾಗಿದೆ ಎಂದರು.
ಇದನ್ನೂ ಓದಿ : ರೈಲಿನಿಂದ ಬಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು
ನಾಮಧಾರಿ ಗುರುಮಠ ದೇವಸ್ಥಾನದ ಅಧ್ಯಕ್ಷ ಅರುಣಕುಮಾರ ನಾಯ್ಕ ಮಾತನಾಡಿ ಇಲ್ಲಿನ ಭಜನಾ ಸತತದ ಯುವಕರು ಸತತ ೨೪ ದಿನ ಭಜನಾ ಸಪ್ತಾಹ ಕಾರ್ಯಕ್ರಮವನ್ನು ಅಚ್ಚಕಟ್ಟಾಗಿ ನೆರವೇರಿಸಿರುವುದು ಸಂತಸದ ವಿಚಾರ ಎಂದರು. ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಭಜನ ಕುಣಿತದ ನಿರ್ಣಾಯಕರಾಗಿ ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ನಿರ್ವಹಿಸಿದರು. ವೇದಿಕೆಯಲ್ಲಿ ಶ್ರೀ ಗುರುಮಠ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪ್ರಮುಖರ ಉಪಸ್ಥಿತರಿದ್ದರು.
ಇದನ್ನೂ ಓದಿ : ‘ಪಣಿ’ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ