ಭಟ್ಕಳ: ಯೋಗದ ಮೂಲಕ ಸಮಾಜದಲ್ಲಿ ಆರೋಗ್ಯಕರ ಬದುಕಿನ ಅರಿವು ಮೂಡಿಸಿ, ನಿರಂತರ ಸೇವಾಭಾವದಿಂದ ಎರಡು ದಶಕಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸಿರುವ ಭಟ್ಕಳ ತಾಲೂಕಿನ ಹೆಬಳೆ ನಿವಾಸಿ, ಯೋಗಗುರು (Yoga Guru) ಗೋವಿಂದ ಎನ್ ದೇವಾಡಿಗ ಅವರಿಗೆ ‘ಭಾರತೀಯ ಯೋಗ ರತ್ನ–೨೦೨೬’ ಪ್ರಶಸ್ತಿ (award) ನೀಡಿ ಗೌರವಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಾರತ ಸರ್ಕಾರದಲ್ಲಿ ನೋಂದಾಯಿತ ಹಾಗೂ ನೀತಿ ಆಯೋಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ದಿ ಇಂಡಿಯನ್ ಫೋರಮ್ ಆಫ್ ಸೋಷಿಯಲ್ ಲೀಡರ್ಸ್ ಆ್ಯಂಡ್ ಅಚೀವರ್ಸ್ ಸಂಸ್ಥೆಯು ಮಂಗಳೂರಿನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿತು.
passes away/ ಭಟ್ಕಳದ ನಿವೃತ್ತ ಎಎಸ್‌ಐ ನಿಧನ
ಯೋಗದ ಮೂಲಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಜೀವನಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ, ಸಮಾಜಮುಖಿ ಕಾರ್ಯನಿರ್ವಹಣೆ, ಯೋಗಾಭ್ಯಾಸವನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದ ಶ್ರಮ ಹಾಗೂ ಸರ್ವಾಂಗೀಣ ಯೋಗಕ್ಷೇಮಕ್ಕಾಗಿ ತೋರಿದ ಬದ್ಧತೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.
school vehicles/ ಭಟ್ಕಳದಲ್ಲಿ ಶಾಲಾ ವಾಹನಗಳಿಗೆ ದಂಡ
(Yoga Guru) ಗೋವಿಂದ ಎನ್ ದೇವಾಡಿಗ ಕಳೆದ ೨೫ ವರ್ಷಗಳಿಂದ ಪತಂಜಲಿ (Patanjali) ಯೋಗ ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ನೂರಾರು ಯೋಗ ಶಿಬಿರಗಳನ್ನು ನಡೆಸಿದ್ದಾರೆ. ಭಟ್ಕಳ (Bhatkal) ತಾಲೂಕಿನ ಹಳ್ಳಿ-ಹಳ್ಳಿಗಳಿಗೆ ತೆರಳಿ ಎಲ್ಲ ವಯೋಮಾನದ ಜನರಿಗೆ ಯೋಗಾಭ್ಯಾಸದ ತರಬೇತಿ ನೀಡಿ ಆರೋಗ್ಯಕರ ಜೀವನಶೈಲಿಯ ಸಂದೇಶವನ್ನು ಹರಡುತ್ತಿದ್ದಾರೆ. ಅವರ ಸೇವೆಯಿಂದ ಅನೇಕರು ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡಿದ್ದಾರೆ.
Poultry Waste Disposal/ ಗ್ರಾಮಸ್ಥರ ಕೈಗೆ ಸಿಕ್ಕ ಕೋಳಿ ತ್ಯಾಜ್ಯ ವಾಹನ


