ಭಟ್ಕಳ ಡೈರಿ ವರದಿ
ಭಟ್ಕಳ: ೪೦ ಅಡಿ ಆಳದ ಬಾವಿಗೆ ಬಿದ್ದ ಬಿಡಾಡಿ ಹೋರಿಯೊಂದನ್ನು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಮುರುಡೇಶ್ವರದ ಮಾವಳ್ಳಿ-೧ರ ಕೋನಾರಕೇರಿಯಲ್ಲಿ ನಡೆದಿದೆ.
ರಾಮ ಜಟ್ಟಾ ನಾಯ್ಕ ಅವರ ತೋಟದಲ್ಲಿರುವ ಸುಮಾರು ೪೦ ಅಡಿ ಆಳದ, ೧೦ ಅಡಿ ನೀರಿದ್ದ ಬಾವಿಗೆ ಹೋರಿಯೊಂದು ಆಕಸ್ಮಿಕವಾಗಿ ಬಿದ್ದಿತ್ತು. ಹೋರಿ ಬಾವಿಗೆ ಬಿದ್ದಿರುವ ಕುರಿತು ಭಟ್ಕಳ ಅಗ್ನಿಶಾಮಕ ಠಾಣೆಗೆ ಮಾಹಿತಿ ಬಂದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ, ಹೋರಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಹ್ಮದ್ ಶಫಿ ಮೊಗಲ ಹಾಗೂ ಸಿಬ್ಬಂದಿ ಮೋಹನ ಶೆಟ್ಟಿ, ಗಜಾನನ ದೇವಾಡಿಗ, ಶಿವಪ್ರಸಾದ ನಾಯ್ಕ, ಸುಧಾಕರ ದೇವಾಡಿಗ ಮತ್ತು ಸಾತಪ್ಪ ನುಚ್ಚಿಂಡಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:
ಆಟೋ ಚಾಲಕರ ಗಣೇಶೋತ್ಸವ ಮೈದಾನದ ಜಾಗ ರದ್ದು: ಸುನೀಲ ನಾಯ್ಕ ಆಕ್ರೋಶ
ಶಿರಾಲಿ ಸಮೀಪ ಕಾರು–ಬೈಕ್ ಅಪಘಾತ: ೧೬ ವರ್ಷದ ಬಾಲಕನಿಗೆ ಗಂಭೀರ ಗಾಯ
೧ ಕೋಟಿ ವೆಚ್ಚದಲ್ಲಿ ಮುರುಡೇಶ್ವರ ಗಣೇಶೋತ್ಸವ; ೫೦ನೇ ವರ್ಷದ ಸಂಭ್ರಮಕ್ಕೆ ಸಿದ್ಧತೆ
