ಭಟ್ಕಳ: ವ್ಯಾಪಾರದಲ್ಲಿ ಶಿಸ್ತು ಮತ್ತು ನೈತಿಕತೆ ಬೆಳೆಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಅನ್ಪಾಲ್‌ ಗ್ರೂಪ್‌ ಆಪ್‌ ಕಂಪೆನಿಯ ಮ್ಯಾನೇಜರ್‌ ಅಚ್ಯುತ್‌ ಕಾಮತ್‌ ಹೇಳಿದರು. ಅವರು ಶನಿವಾರ ಭಟ್ಕಳ (Bhatkal) ನಗರದ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ವ್ಯಾಪಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆ ಭಟ್ಕಳಕ್ಕೆ (Bhatkal) ಒಂದು ಹೆಮ್ಮೆಯಾಗಿದೆ. ಈ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ದೇಶದ ಪ್ರತಿಷ್ಠಿತ ಐಐಟಿ ಹಾಗೂ ಎಮ್ಸ್‌ ನಲ್ಲಿ ಸೀಟು ಪಡೆಯುತ್ತಿರುವುದು ಸಂಸ್ಥೆಯ ಭೋದನಾ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಮಾತನಾಡಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯವಹಾರದ ಜ್ಞಾನದ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ವ್ಯಾಪಾರ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಇದನ್ನು ಓದಿ: Murudeshwara/ 11 ಮಂದಿ ಬಂಧನ; ನಗದು–ಮೊಬೈಲ್ ವಶ

ಕಾಲೇಜಿನ ಉಪನ್ಯಾಸಕರಾದ ಪ್ರಕಾಶ ಕೆದ್ಲೆ ಹಾಗೂ ಶಾಂತಲಾ ಪ್ರಭು ಮಾತನಾಡಿದರು. ಉಪನ್ಯಾಸಕ ಗಣಪತಿ ನಾಯ್ಕ ಸ್ವಾಗತಿಸಿ, ನಿರೂಪಿಸಿದರು. ನರೇಂದ್ರ ನಾಯ್ಕ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ವ್ಯಾಪಾರ ಮೇಳದಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ತಯಾರು ಮಾಡಿದ ಬಗೆಬಗೆಯ ಭಕ್ಷ್ಯಗಳನ್ನು ಖರೀದಿ ಮಾಡಿ ಸವಿದು ವಿದ್ಯಾರ್ಥಿಗಳು ಖುಷಿಪಟ್ಟರು.

ಇದನ್ನು ಓದಿ: Sharavati project/ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ