ಶಿವಮೊಗ್ಗ/ಚಿಕ್ಕಮಗಳೂರು: ಕುದುರೆಮುಖ (Kudremukh) ವನ್ಯಜೀವಿ (wildlife) ವಿಭಾಗದ ಕಾರ್ಕಳ (Karkala) ವನ್ಯಜೀವಿ ವಲಯದ ಅಧಿಕಾರಿಗಳು ಅವಸಾನದ ಅಂಚಿನಲ್ಲಿರುವ ಭಾರತೀಯ ಕಾಡುಗೋಣಗಳನ್ನು (Gaur) ಬೇಟೆಯಾಡುತ್ತಿದ್ದ ಶಂಕಿತ ಭಟ್ಕಳ ಗ್ಯಾಂಗ್ (Bhatkal Gang) ಹಿಡಿದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ಮತ್ತು ನೆರೆಯ ಬೈಂದೂರು (byndoor) ನಿವಾಸಿಗಳಾದ ಮೊಹಮ್ಮದ್ ಅಶ್ರಫ್, ಅಲಿ ಬಾಪು ಯಾಸೀನ್ ಮತ್ತು ವಾಸಿಂ ಅಕ್ರಂ ಬಂಧಿತರು. ಈ ಬಂಧನದಿಂದ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ವಿಭಾಗದಲ್ಲಿನ ಮತ್ತೊಂದು ಕಳ್ಳಬೇಟೆ ಪ್ರಕರಣದಲ್ಲಿ ಬಂಧಿತ ಭಟ್ಕಳ ಗ್ಯಾಂಗ್ (Bhatkal Gang) ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರು ಜ.೮ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagar) ತಾಲೂಕಿನ ಸಂಪೆಕಟ್ಟೆ ಬಳಿಯ ಮಟ್ಟಿಕಾಯಿ ರಾಜ್ಯ ಅರಣ್ಯದಲ್ಲಿ ಹೆಣ್ಣು ಕಾಡುಕೋಣ ಸಾವಿಗೆ ಸಂಬಂಧಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : Heart check up/ ಉಚಿತ ಹೃದಯ ತಪಾಸಣಾ ಶಿಬಿರ
ಕಾರ್ಕಳ ವನ್ಯಜೀವಿ ಸಿಬ್ಬಂದಿ ಆರೋಪಿ ಅಲಿಯನ್ನು ಬೇಟೆಯ ಆರೋಪದ ಮೇಲೆ ಜನವರಿಯ ಆರಂಭದಲ್ಲಿ ಬಂಧಿಸಿದ್ದರು. ಈತನಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಈತ ಉಡುಪಿಯ (Udupi) ಕುಂದಾಪುರ (Kundapur) ವಿಭಾಗದ ಶಂಕರನಾರಾಯಣ ರೇಂಜ್ ಫಾರೆಸ್ಟ್‌ನಲ್ಲಿ ನಡೆದ ಕಾಡುಕೋಣ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಕುದುರೆಮುಖ ಡಿಸಿಎಫ್ ಎಂ.ಶಿವರಾಮಬಾಬು ಅವರ ಪ್ರಯತ್ನದಿಂದ ಮೂವರ ಬಂಧನವಾಗಿದೆ. ಈ ಮೂಲಕ ಶಿವಮೊಗ್ಗ ಸೇರಿದಂತೆ ವಿವಿಧ ಪ್ರಕರಣಗಳನ್ನು ಭೇದಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು (Chikkamagaluru), ಉಡುಪಿ ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಈ ವರ್ಷ ಹಲವಾರು ಹೆಣ್ಣು ಕಾಡುಕೋಣಗಳು ಸಾವನ್ನಪ್ಪಿವೆ.
ಇದನ್ನೂ ಓದಿ : Book Release/ ಮಧುರಗಾನ ಪುಸ್ತಕ ಬಿಡುಗಡೆ