ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ (Bhatkal GSB) ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೮ನೇ ವಾರ್ಷಿಕೋತ್ಸವವು ದಿ. ೧೮.೦೧.೨೦೨೬ ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಶಿರಸಿಯ (Sirsi) ವೇ.ಮೂ ಶ್ರೀಶರಣ ಆಚಾರ್ಯ ರವರು ಭಟ್ಕಳ ಜಿ.ಎಸ್.ಎಸ್ ಸಂಸ್ಥೆಯ ಸಾಮಾಜಿಕ ಕಾರ್ಯಗಳು, ಜಿ.ಎಸ್.ಬಿ ಭಟ್ಕಳ (Bhatkal GSB) ಯೋಜನೆ ಪರಿಕಲ್ಪನೆಯನ್ನು ಶ್ಲಾಘಿಸಿ, ಯುವಕ ಯುವತಿಯರು ಶಿಕ್ಷಣದ ಜೊತೆಯಲ್ಲಿ ಧರ್ಮ, ಸಂಸ್ಕೃತಿಗೆ ಪ್ರಾಶಸ್ತ್ಯ ನೀಡಬೇಕೆಂದು ತಿಳಿಸಿದರು.
ಇದನ್ನು ಓದಿ: Kalabhairava/ ಜ 28ರಂದು ಗೋಕರ್ಣದಲ್ಲಿ ಕಾಲಭೈರವ ಉತ್ಸವ
ಗೌರವಾಧ್ಯಕ್ಷ ನರೇಂದ್ರ ನಾಯಕ ಜಿ.ಎಸ್.ಎಸ್ ಬೆಳೆದು ಬಂದ ಹಾದಿಯನ್ನು ತಿಳಿಸುತ್ತಾ, ಎಲ್ಲರೂ ಸಮಾಜ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಮಾತೃಭಾಷೆ ಬಳಕೆಯನ್ನು ಮಾಡಬೇಕೆಂದು ತಿಳಿಸಿದರು.
ಇದನ್ನು ಓದಿ: Kogti Jathre/ ಕೋಗ್ತಿ ಜಾತ್ರೆ ಸಂಪನ್ನ
ಈ ಸಂದರ್ಭದಲ್ಲಿ ಪುತ್ತು ಪೈರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರವನ್ನು ಸಮಾಜದ ಹಿರಿಯ ಸೇವಕ ರಘುವೀರ ಬಾಳ್ಗಿಯವರಿಗೆ, ಕೆ.ಎಂ.ನಾಯಕ ಸಾಧಕ ಪುರಸ್ಕಾರವನ್ನು ಶಟಲ್ ಬ್ಯಾಡ್ಮಿಂಟನ್ ಸಾಧಕ ನಿಖಿಲ ನಾಗರಾಜ ಶಾನಭಾಗ ರವರಿಗೆ, ತಾರಾಬಾಯಿ ಹನುಮಂತ ಶಾನಭಾಗ ಸ್ಮರಣಾರ್ಥ ಆದರ್ಶ ಸದ್ಗೃಹಿಣಿ ಪರಸ್ಕಾರವನ್ನು ಉಷಾ ಶ್ರೀನಿವಾಸ ಪೈ ರಿಗೆ ನೀಡಲಾಯಿತು.
ಉನ್ನತ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ, ರ‍್ಯಾಂಕ ಪಡೆದ ವಿದ್ಯಾರ್ಥಿಗಳಾದ ಅನಿರುದ್ಧ ರಾಮು ಕಾಮತ (ಬಂಗಾರದ ಪದಕ – ಬಿ.ಫಾರ್ಮಾ), ನೇಹಾ ಭಾಸ್ಕರ ಕಾಮತ (ಬಂಗಾರದ ಪದಕ ಗಣಕಯಂತ್ರ ಪದವಿ), ಡಾ. ಪೂಜಾ ಕಾಮತ (ಡಿ.ಎಂ ಉನ್ನತ ವ್ಯಾಸಂಗ), ಶೀತಲ ಪ್ರಭು (ಫೀಸಿಯೋಥೆರಪಿ), ವಿಂಧ್ಯಾ ಬಡಾಲ (ಬಂಗಾರದ ಪದಕ) ರವರಿಗೆ ಸನ್ಮಾನಿಸಲಾಯಿತು.
ಇದನ್ನು ಓದಿ: Achievement award/ ಉಮೇಶ ಮುಂಡಳ್ಳಿಗೆ ಕಾಸರಗೋಡು ಕನ್ನಡ ಭವನದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ಪ್ರದಾನ
ವಂದೇ ಮಾತರಂ ಗೀತೆಯ ೧೫೦ನೇ ಹಾಗೂ ಆರ್.ಎಸ್.ಎಸ್ ನ ೧೦೦ನೇ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಸಾಮೂಹಿಕ ಗೌರವ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಿ.ಎಸ್.ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಜಿ.ಎಸ್.ಎಸ್ ಅಧ್ಯಕ್ಷ ಗಿರಿಧರ ನಾಯಕ, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಪೈ, ಗೌರವಾಧ್ಯಕ್ಷ ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ, ಕಿರಣ ಶಾನಭಾಗ, ಕಲ್ಪೇಶ ಪೈ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನು ಓದಿ: Haladi/ ೨೧ರಂದು ಹಾಲಾಡಿಯಲ್ಲಿ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನ
ಸಮಾಜ ಬಾಂಧವರಿಂದ ರಾಷ್ಟ್ರ ಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ, ಲಕ್ಕಿ ಜಿ.ಎಸ್.ಬಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುರುದಾಸ್ ಪ್ರಭು, ಶ್ರೀನಾಥ ಪೈ, ಚೈತ್ರಾ ಕಾಮತ ಕಾರ್ಯಕ್ರಮ ನಿರೂಪಿಸಿದರು. ದೀಪಕ ನಾಯಕ ಸ್ವಾಗತಿಸಿದರು. ನಕುಲ ಕಾಮತ ವಂದಿಸಿದರು.
ಇದನ್ನು ಓದಿ: Instagram ಖಾತೆಯಲ್ಲಿ ಮಹಿಳೆಗೆ ಬರುತ್ತಿದೆ ಅಶ್ಲೀಲ ಕಾಮೆಂಟ್



