ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಳೆ ವಿಪತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಸಂಪುಟ ದರ್ಜೆ ಸಚಿವ ಲಕ್ಷ್ಮಣ ಸವದಿ ಇಂದು (ಆಗಸ್ಟ್ ೬) ಮತ್ತು ನಾಳೆ (ಆಗಸ್ಟ್ ೭ರಂದು) ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅತಿವೃಷ್ಟಿ (heavy rains) ಮತ್ತು ಅನಾವೃಷ್ಟಿ (drought) ಸಂಬಂಧಿಸಿದಂತೆ ಹಲವು ತಾಲೂಕುಗಳಿಗೆ ಈ ಎರಡು ದಿನದ ಪ್ರವಾಸದಲ್ಲಿ ಭೇಟಿ ನೀಡಲಿರುವ ಸಚಿವ ಲಕ್ಷ್ಮಣ ಸವದಿ (Minister Laxman Savadi), ಭಟ್ಕಳಕ್ಕೆ ಬಾರದಿರುವುದು (Bhatkal visit) ಜನರಲ್ಲಿ ಬೇಸರ ಮೂಡಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಹಾನಿಯ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಉದ್ದೇಶದಿಂದ ಸಚಿವ ಲಕ್ಷ್ಮಣ ಸವದಿ (Minister Laxman Savadi) ಪ್ರವಾಸ ಕೈಗೊಂಡಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳು ಹಾಗೂ ಅನಾವೃಷ್ಟಿಯ ಪರಿಣಾಮ ಎದುರಿಸುತ್ತಿರುವ ತಾಲೂಕುಗಳ ಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ.
Mariyamma/ ಮಾರಿಯಮ್ಮನ ದರ್ಶನಕ್ಕೆ ಮೊದಲ ದಿನ ಭಕ್ತಸಾಗರ
ಆದರೆ, ಭಟ್ಕಳ (Bhatkal) ತಾಲೂಕು ಸಹ ಮಳೆ ಸಂಬಂಧಿತ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ರಸ್ತೆ ಹಾನಿ, ಗುಡ್ಡ ಕುಸಿತದ ಆತಂಕಗಳಿವೆ, ಕೃಷಿಗೆ ಉಂಟಾದ ಹಾನಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಅನಾವೃಷ್ಟಿ ಸಮಸ್ಯೆಯು ಭಟ್ಕಳ ತಾಲೂಕನ್ನು ಬಾಧಿಸಿದೆ. ಈ ಹಿನ್ನೆಲೆಯಲ್ಲಿ ಸಚಿವರು ಭಟ್ಕಳಕ್ಕೂ ಭೇಟಿ ನೀಡಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
Mari Jathre begins/ ಗದ್ದುಗೆ ಏರಿದ ಮಾರಿಯಮ್ಮ
ಎಲ್ಲೆಲ್ಲಿ ಕಾರ್ಯಕ್ರಮ?:
ಇಂದು ಬೆಳಗ್ಗೆ ೧೧ ಗಂಟೆಗೆ ಲೋಕೋಪಯೋಗಿ (PWD) ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಮಧ್ಯಾಹ್ನ ೧೨ ಗಂಟೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲ್ಲಿದ್ದಾರೆ. ನಂತರ ಮಧ್ಯಾಹ್ನ ೩ ಗಂಟೆಗೆ ಅಂಕೋಲಾ (Ankola) ತಾಲೂಕಿನ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂಬಂಧಿಸಿದ ಆಯ್ದ ಸ್ಥಳಗಳಿಗೆ ಭೇಟಿ ನೀಡಿ, ಸಂಜೆ ೫ ಗಂಟೆಗೆ ಹೊನ್ನಾವರ (Honnavar) ಲೋಕೋಪಯೋಗಿ ಪರೀಕ್ಷಣಾ ಮಂದಿರಕ್ಕೆ ಆಗಮಿಸಲಿದ್ದಾರೆ. ಅಲ್ಲಿಯೇ ಕುಮಟಾ (Kumta), ಹೊನ್ನಾವರ, ಭಟ್ಕಳ ತಾಲೂಕಿನ ಮಳೆ ವಿಪತ್ತಿಗೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ. ತದ ನಂತರ ಆಯ್ದ ಪ್ರದೇಶಗಳ ವೀಕ್ಷಣೆ ಮಾಡುವ ಕಾರ್ಯಕ್ರಮ ನಿಗದಿಯಿದ್ದರೂ ಯಾವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವಾಸ್ತವ್ಯದ ಬಗ್ಗೆಯೂ ಮಾಹಿತಿಯಿಲ್ಲ.
Opportunity/ ಗ್ರಾಮ ಒನ್ ಕೇಂದ್ರ ಆರಂಭಿಸಲು ಅವಕಾಶ
ನಾಳೆ ಬೆಳಗ್ಗೆ ೧೦.೩೦ ಗಂಟೆಗೆ ಶಿರಸಿಯ (Sirsi) ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಿರಸಿ ಮತ್ತು ಸಿದ್ದಾಪುರ ತಾಲೂಕಿಗೆ ಸಂಬಂಧಿಸಿದಂತೆ ಸಭೆ, ೧೧.೩೦ ಗಂಟೆಗೆ ಶಿರಸಿ ತಾಲೂಕಿನ ಆಯ್ದ ಸ್ಥಳಗಳಿಗೆ ಭೇಟಿ, ಮಧ್ಯಾಹ್ನ ೧ ಗಂಟೆಗೆ ಶಿರಸಿ ತಾಲೂಕಿನ ಬನವಾಸಿ (Banavasi) ಭಾಗದ ಆಯ್ದ ಸ್ಥಳಗಳಿಗೆ ಭೇಟಿ, ೩ ಗಂಟೆಗೆ ಮುಂಡಗೋಡ (Mundgod) ಲೋಕೋಪಯೋಗಿ ಪರಿವೀಕ್ಷಣಾ ಮಂದಿರದಲ್ಲಿ ಯಲ್ಲಾಪುರ (Yellapur), ಮುಂಡಗೋಡ ತಾಲೂಕಿನ ಸಭೆ ಮತ್ತು ಆಯ್ದ ಪ್ರದೇಶಗಳ ವೀಕ್ಷಣೆ, ಸಂಜೆ ೪.೩೦ ಗಂಟೆಗೆ ಹಳಿಯಾಳ (Haliyal) ಪುರಭವನದಲ್ಲಿ ಹಳಿಯಾಳ, ದಾಂಡೇಲಿ (Dandel), ಜೋಯಿಡಾ (Joida) ತಾಲೂಕಗಳ ಸಭೆ ಮತ್ತು ಆಯ್ದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Retirement/ ೩೬ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಂಚೆ ಮೇಲ್ವಿಚಾರಕ
ಜಿಲ್ಲೆಯ ಮಳೆ ವಿಪತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಸಚಿವರ ಪ್ರವಾಸದಲ್ಲಿ ಭಟ್ಕಳಕ್ಕೆ ಸ್ಥಾನ ಸಿಗದಿರುವುದು ಸಾರ್ವಜನಿಕರ ನಡುವೆ ಚರ್ಚೆಗೆ ಕಾರಣವಾಗಿದೆ. ಹೊನ್ನಾವರದಲ್ಲಿನ ಸಭೆಯ ನಂತರ ಭಟ್ಕಳದ ಸಮಸ್ಯೆಗಳನ್ನೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸಚಿವರ ಈ ಪ್ರವಾಸದ ಬಳಿಕ ಭಟ್ಕಳಕ್ಕೂ ಪ್ರತ್ಯೇಕ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
polling stations/ ಭಟ್ಕಳ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಲಿರುವ ಮತಗಟ್ಟೆಗಳು


