ಭಟ್ಕಳ: ನಗರದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಭಟ್ಕಳ (Bhatkal) ತಾಲೂಕು ಮಟ್ಟದ ಕರಾಟೆ ಸ್ಪರ್ಧೆ (Karate Competition) ಇತ್ತೀಚೆಗೆ ನಡೆಯಿತು. ಸ್ಪೋರ್ಟ್ ಕರಾಟೆ ಇನ್ಸ್ಟಿಟ್ಯೂಟ್ ಭಟ್ಕಳದ ಕರಾಟೆ ಶಿಕ್ಷಕರಿಂದ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ೨೬೦ಕ್ಕೂ ಹೆಚ್ಚು ಕರಾಟೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ (Karate Competition) ಭಾಗವಹಿಸಿದ್ದರು. ಭಟ್ಕಳದ ವಿವಿಧ ಶಾಲೆಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ೧೧ ವಿದ್ಯಾರ್ಥಿಗಳು, ಬಾಲಕಿಯರ ವಿಭಾಗದಲ್ಲಿ ೧೦ ವಿದ್ಯಾರ್ಥಿನಿಯರು ಮತ್ತು ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ೧೩ವಿದ್ಯಾರ್ಥಿಗಳು ಹಾಗೂ ಬಾಲಕಿಯರ ವಿಭಾಗದಲ್ಲಿ ೧೧ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Taxi Association/ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಆಯ್ಕೆ
ಈ ಸಂದರ್ಭದಲ್ಲಿ ಭಟ್ಕಳ ಟಿಪಿಒ ಪ್ರಕಾಶ್ ಶಿರಾಲಿ, ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕರಾಟೆ ಪಂದ್ಯಾವಳಿಯನ್ನು ವೀಕ್ಷಣೆ ಮಾಡಿದರು. ಶ್ರೀ ನಾಗಯಕ್ಷೆ ಸಭಾಭವನದ ಆಡಳಿತ ಮಂಡಳಿಯ ಕೃಷ್ಣಾನಂದ ಪ್ರಭು ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಕರಾಟೆ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಈಶ್ವರ ನಾಯ್ಕ, ಗೌರವಾಧ್ಯಕ್ಷ ಉಮೇಶ ಮೊಗೇರ, ವಕೀಲ ಮನೋಜ ನಾಯ್ಕ, ಪ್ರಧಾನ ಕಾರ್ಯದರ್ಶಿ ಚಂದ್ರು ನಾಯ್ಕ, ಹಿರಿಯ ಕರಾಟೆ ಶಿಕ್ಷಕರಾದ ನಾಗಪ್ಪ ನಾಯ್ಕ, ಸುರೇಶ ನಾಯ್ಕ, ಅಶೋಕ ನಾಯ್ಕ, ವೆಂಕಟೇಶ ಮೊಗೇರ, ಸುರೇಶ ನಾಯ್ಕ ಮತ್ತು ನಾಗಶ್ರೀ ನಾಯ್ಕ, ಡಿ ಪ್ರದೀಪ್, ಅಖಿಲ್ ಕಾಮತ, ನಿಕಿತಾ ನಾಯ್ಕ, ಅಮರ್ ಶಾ, ಮಹಮ್ಮದ್ ಇಸ್ಮಾಯಿಲ್, ಪವನ್ ನಾಯ್ಕ ಹಾಗೂ ಸಂಸ್ಥೆಯ ಸದಸ್ಯರುಗಳು ಈ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಇದನ್ನೂ ಓದಿ: Mega job interview/ ಭಟ್ಕಳದಲ್ಲಿ ಮೆಗಾ ಉದ್ಯೋಗ ಸಂದರ್ಶನ



