ಭಟ್ಕಳ: ನಗರದ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಜ ೩೧ರಂದು ಸಂಜೆ ೫ಕ್ಕೆ ವಿದುಷಿ ಧನಲಕ್ಷ್ಮಿ ಮೊಗೇರ ಅವರ ಭರತನಾಟ್ಯ (Bharatanatya) ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧನಲಕ್ಷ್ಮೀ ಮೊಗೇರ ಪ್ರತಿಭಾವಂತಳಾಗಿದ್ದು, ತನ್ನ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯವನ್ನು (Bharatanatya) ನೃತ್ಯ ಮತ್ತು ಸಂಗೀತ ಶಿಕ್ಷಣ ಪಡೆಯುತ್ತಾ ಜ್ಯೂನಿಯರ್‌ ಹಂತವನ್ನು ವಿದುಷಿ ನಮೃತಾ ತಿಲಕರಾವ್ ಅವರಲ್ಲಿ ಅಭ್ಯಸಿಸಿ, ಸೀನಿಯರ್‌ಹಾಗೂ ವಿದ್ವತ್ ಹಂತವನ್ನು ವಿದುಷಿ ನಯನಾ ಪ್ರಸನ್ನ ಪ್ರಭು ಅವರಲ್ಲಿ ಪೂರ್ಣಗೊಳಿಸಿದ್ದಾಳೆ. ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುವ ಈಕೆ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬೈ ಅವರು ನಡೆಸುವ ವಿಶಾರದ, ಅಲಂಕಾರ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ದಿ। ವೆಂಕಟೇಶ ಭಟ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಜೂನಿಯರ್ ಪೂರ್ಣಗೊಳಿಸಿದ ಸಾಧನೆ ಈಕೆಯದ್ದು. ಈಕೆ ಭಟ್ಕಳ ಅರ್ಬನ್ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಮೊಗೇರ ಹಾಗೂ ಶಾರದಾ ಅವರ ಪುತ್ರಿ.

ಇದನ್ನು ಓದಿ: arrested/ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದವ ಪೊಲೀಸ್ ಅತಿಥಿ

ಧನಲಕ್ಷ್ಮೀ ೨೦೧೭ರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನಗಳಿಸಿ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾಳೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಸೀನಿಯರ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ‌ರ್ಯಾಂಕ್ ಪಡೆದಿರುತ್ತಾಳೆ. ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ, ಅಲಂಕಾರ್‌ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತೃತೀಯ ಸ್ಥಾನ, ೨೦೨೨ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ತೃತೀಯ ಸ್ಥಾನ, ಕೆನರಾ ಪ್ಲಸ್ ವಾಹಿನಿಯು ನಡೆಸಿದ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಕರಾವಳಿ ಉತ್ಸವ, ಯುಗಾದಿ ಉತ್ತವ, ಉಡುಪಿಯ ರಾಜಾಂಗಣ, ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಮುಂಡಗೋಡ, ದಾಂಡೇಲಿ, ಗದಗ ಮುಂತಾದ ಹಲವೆಡೆ ನೂರಾರು ಕಾರ್ಯಕ್ರಮಗಳನ್ನು ನೀಡಿದ ಖ್ಯಾತಿ ಈಕೆಯದ್ದು.

ಇದನ್ನು ಓದಿ: Land dispute/ ಜಾಗದ ವಿಷಯದಲ್ಲಿ ಕುಟುಂಬಗಳ ನಡುವೆ ಗಲಾಟೆ 

ಜ ೩೨ರಂದು ನಾಗಯಕ್ಷೆ ಸಭಾ ಭವನದಲ್ಲಿ ನಡೆಯಲಿರುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ‘ಕಲಾ ಸುಜಯ’ ಸಂಸ್ಥೆ ಹುಬ್ಬಳ್ಳಿಯ ಸಂಸ್ಥಾಪಕ ವಿದ್ವಾನ್ ಸುಜಯ್ ಶಾನಭಾಗ ಉಪಸ್ಥಿತರಿರಲಿದ್ದಾರೆ. ಹಾಡುಗಾರಿಕೆಯಲ್ಲಿ ವಿದ್ವಾನ್ ರಾಜೀವ್ ರಾಜಗೋಪಾಲನ್, ಬೆಂಗಳೂರು; ನಟುವಾಂಗದಲ್ಲಿ ವಿದುಷಿ ನಯನಾ ಪ್ರಸನ್ನ, ಭಟ್ಕಳ; ಮೃದಂಗದಲ್ಲಿ ವಿದ್ವಾನ್ ಲಕ್ಷ್ಮೀನಾರಾಯಣ, ಬೆಂಗಳೂರು; ಕೊಳಲಿನಲ್ಲಿ ವಿದ್ವಾನ್ ದೀಪಕ್ ಹೆಬ್ಬಾರ್, ಬೆಂಗಳೂರು; ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ರಾಘವೇಂದ್ರ ರಂಗಧೋಳ್, ಶಿವಮೊಗ್ಗ ಇವರು ಭಾಗವಹಿಸಲಿದ್ದಾರೆ. ವಿದುಷಿ ಪಲ್ಲವಿ ಗಾಯತ್ರಿ, ಬೆಂಗಳೂರು ಇವರು ನಿರೂಪಿಸಲಿದ್ದಾರೆ.

ಇದನ್ನು ಓದಿ: Outstanding Achiever/ ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿ ಪ್ರದಾನ